ಮುಳ್ಳೇರಿಯ: ವಲವಡಲ ಶ್ರೀ ಮಹಾದೇವ ಮಹಾವಿಷ್ಣು ಸನ್ನಿಧಿ ಜೋಡು ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಾನುವಾರ ಬಡಗುಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದಿಂದ ಹಸಿರುವಾಣಿ ಕಾಣಿಕೆ ಸಮರ್ಪಿಸಲಾಯಿತು. ಸಂಜೆ 6 ಗಂಟೆಗೆ ಮೆರವಣಿಗೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ತಮ್ಮ ಕಾಣಿಕೆಯನ್ನು ಸಮರ್ಪಿಸಿದರು. ಶ್ರೀ ಮಹಾದೇವ ಸನ್ನಿಧಿಯಲ್ಲಿ ಸೋಮವಾರ ಬೆಳಗ್ಗೆ ವಿವಿಧ ಕಾರ್ಯಕ್ರಮಗಳು, ವಿವಿಧ ಭಜನಾ ಸಂಘಗಳಿಂದ ಭಜನೆ ಜರಗಿತು. ಬೆಳಗ್ಗೆ ಧಾರ್ಮಿಕ ಸಭೆ ನಡೆಯಿತು.
ಇಂದಿನ (ಮಾ.21) ಕಾರ್ಯಕ್ರಮಗಳು :
ಶ್ರೀ ಮಹಾದೇವ ಸನ್ನಿಧಿಯಲ್ಲಿ ಬೆಳಗ್ಗೆ ಗಣಪತಿ ಹೋಮ, ತತ್ವಕಲಶಪೂಜೆ, ತ್ರಿಕಾಲಪೂಜೆ, ಅಂಕುರ ಪೂಜೆ, ಮಹಾಪೂಜೆ, ವಿವಿಧ ಭಜನಾ ಸಂಘಗಳಿಂದ ಭಜನೆ, ಸಂಜೆ 7ರಿಂದ ಅನುಜ್ಞಾ ಬಲಿ, ಕ್ಷೇತ್ರಪಾಲನಲ್ಲಿ ಅನುಜ್ಞಾ ಪ್ರಾರ್ಥನೆ, ಬಿಂಬಶುದ್ಧಿ, ಕಲಶಪೂಜೆ, ಅಂಕುರ ಪೂಜೆ, ಮಹಾಪೂಜೆ ಜರಗಲಿದೆ. ಪೂರ್ವಾಹ್ನ 11 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಸಂಜೆ 6ರಿಂದ ಸರಸ್ವತಿ ಕೃಷ್ಣನ್ ಮತ್ತು ಶಿಷ್ಯವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಸೌಂದರ್ಯ ಕುಟುಂಬಶ್ರೀ ಪಣಿಯೆ ಸದಸ್ಯೆಯರಿಂದ ತಿರುವಾದಿರಕ್ಕಳಿ, ರಾತ್ರಿ 8.15ರಿಂದ ಸುಂದರ ಎ.ಕೆ. ಮತ್ತು ಬಳಗ ಕಡೆಯಂಗೋಡು ಆದೂರು ತಂಡದವರಿಂದ ಭಕ್ತಿಸಂಗೀತ ನಡೆಯಲಿದೆ.
ವಲವಡಲ ಜೋಡು ದೇವಸ್ಥಾನದಲ್ಲಿ ಇಂದು ಸಂಜೆ ಅನುಜ್ಞಾ ಬಲಿ, ಪ್ರಾರ್ಥನೆ
0
ಮಾರ್ಚ್ 20, 2023