ಮಂಜೇಶ್ವರ: ಗ್ರಾಮೀಣ ಪ್ರದೇಶವಾದ ತೊಟ್ಟೆತ್ತೊಡಿಯ ವಾಣೀವಿಲಾಸ ಕಿರಿಯ ಪ್ರಾಥಮಿಕ ಶಾಲೆ 75 ವರ್ಷಗಳನ್ನು ಪೂರೈಸಿದ್ದು ಮಾರ್ಚ್ 11ರಂದು ಅಮೃತಮಹೋತ್ಸವವನ್ನು ಸಡಗರದಿಂದ ಆಚರಿಸಲಿದೆ.
ವಾಣೀವಿಲಾಸ ಕಿರಿಯ ಪ್ರಾಥಮಿಕ ಶಾಲೆ ತೊಟ್ಟೆತ್ತೋಡಿ ವಿದ್ಯಾ ದೇಗುಲ ಗಡಿನಾಡಿನ ಹೆಮ್ಮೆಯ ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಗಳಲ್ಲಿ ಒಂದು. ಮೀಂಜ ಗ್ರಾಮ ಪಂಚಾಯತಿ ತೀರಾ ಕುಗ್ರಾಮವಾಗಿದ್ದ ಬುಡ್ರಿಯ ಎಂಬಲ್ಲಿ ವಾಣೀವಿಲಾಸ ಶಾಲೆಯ ಉಗಮ. ಬುಡ್ರಿಯ ಪ್ರದೇಶ ತೀರಾ ಹಿಂದುಳಿದ ಪ್ರದೇಶವಾಗಿದ್ದು ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಸುತ್ತುಮುತ್ತ ಹುಲಿ ಹಂದಿ ವಾಸಿಸುತ್ತಿದ್ದ ಗುಡ್ಡ ಕಾಡಿನಿಂದ ಕೂಡಿದ ಪ್ರದೇಶವಾಗಿತ್ತು. ಅಲ್ಲಿನ ಸುತ್ತುಮುತ್ತಲಿನ ಮಂದಿ ಜ್ಞಾನಾರ್ಜನೆಗಾಗಿ ದೂರದ ಮೀಯಪದವು, ಮಂಜೇಶ್ವರದಂತಹ ಶಾಲೆಯನ್ನು ನಡೆದುಕೊಂಡು ಹೋಗಿಬರಬೇಕಾದ ಅನಿವಾರ್ಯತೆಯಿತ್ತು. ಜನರ ಸಂಕಷ್ಟವನ್ನು ಮನಗಂಡು ನಾಡಿನ ಹಿರಿಯ ಮುತ್ಸದ್ಧಿ, ವಿದ್ವಾಂಸರಾಗಿದ್ದ ತೊಟ್ಟೆತ್ತೋಡಿ ನಾರಾಯಣ ಭಟ್ ಹಳ್ಳಿಗರ ಮನೆಯಲ್ಲಿ ವಿದ್ಯೆಯ ಬೆಳಕು ಹಚ್ಚುವ ಸಂಕಲ್ಪದೊಂದಿಗೆ 1948ರ ಆರಂಭದಲ್ಲಿ ತೊಟ್ಟೆತ್ತೋಡಿಯಲ್ಲಿ ಶಾಲೆಯನ್ನು ಆರಂಭಿಸಿದರು ಹಾಗೂ 1948ರ ಮೇ ತಿಂಗಳಲ್ಲಿ ಬುಡ್ರಿಯ ಎಂಬಲ್ಲಿಗೆ ಸ್ಥಳಾಂತರಿಸಲಾಯಿತು.
ಬೆರಳೆಣಿಕೆಯ ವಿದ್ಯಾರ್ಥಿಗಳೊಂದಿಗೆ ಆರಂಭಿಸಿದ ಶಾಲೆಯಲ್ಲಿ ಒಂದರಿಂದ ನಾಲ್ಕನೇ ತರಗತಿ ವರೆಗೆ ವಿದ್ಯಾರ್ಜನೆ ನಡೆಯುತ್ತಿತ್ತು. 4 ಮಂದಿ ಅಧ್ಯಾಪಕರು ಸೇವೆ ಗೈಯುತ್ತಿದ್ದರು ಹಾಗೂ ಮುಂದೆ 1951ರಲ್ಲಿ ಸರ್ಕಾರದ ಅನುದಾನಕ್ಕೊಳಪಟ್ಟಿದ್ದು ನಾಡಿನ ಸೌಬಾಗ್ಯ. ಚಿಗುರುಪಾದೆ, ತೊಟ್ಟೆತ್ತೋಡಿ, ಬುಡ್ರಿಯ, ಅಮ್ಮೆನಡ್ಕ, ಮಿತ್ತಾಳ, ಎಲಿಯಾಣ, ಬೇರಿಕೆ ಪ್ರದೇಶಗಳಿಂದ ವಿದ್ಯಾದಾಹಿಗಳು ವಿದ್ಯಾರ್ಜನೆಗೆ ಬರುತ್ತಿದ್ದರು. ತನ್ಮೂಲಕ ವಿವಿಧ ಕ್ಷೇತ್ರದಲ್ಲಿ ಸೇವೆಗೈದ ನೂರಾರು ಸಾಧಕರನ್ನು ರೂಪಿಸಿ ಸಮಾಜಕ್ಕೆ ಅರ್ಪಿಸಿದ ಹೆಮ್ಮೆ ವಾಣೀವಿಲಾಸ ಶಾಲೆಗೆ ಸಲ್ಲುತ್ತದೆ. ನಾರಾಯಣ ಭಟ್ ಕೀರ್ತಿಶೇಷರಾದ ಬಳಿಕ ಶಾಲಾ ಆಡಳಿತವನ್ನು ಪ್ರೇಮಾಕೆ ಭಟ್ ತೊಟ್ಟೆತ್ತೋಡಿ ಸಮರ್ಥವಾಗಿ ಮುನ್ನಡೆಸುತ್ತಾ ಬಂದಿರುವರು. ಇದೀಗ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಶಾಲಾ ಸಂಚಾಲಕರಾಗಿರುತ್ತಾರೆ.
ಸಾರಿಗೆ ಹಾಗೂ ಸಂಚಾರ ಅನುಕೂಲವನ್ನು ಪರಿಗಣಿಸಿ ಶಾಲೆಯ ವಿದ್ಯಾರ್ಥಿಗಳ ಹೆತ್ತವರ ಒತ್ತಾಸೆ ಮೇರೆಗೆ ಚಿಗುರುಪಾದೆಯ ಕೇಶವಗಿರಿಗೆ ಸÀರ್ಕಾರದ ಅನುಮೋದನೆಯೊಂದಿಗೆ 1986 ಫೆಬ್ರವರಿ 26ರಂದು ಸ್ಥಳಾಂತರಿಸಲಾಯಿತು. ಹಾಗೂ ನೂತನ ಕಟ್ಟಡವನ್ನು ಕೇರಳ ಸರ್ಕಾರದ ಮಾಜಿ ನೀರಾವರಿ ಮಂತ್ರಿ ಡಾ.ಎಂ.ಸುಬ್ಬರಾವ್ ಉದ್ಘಾಟಿಸಿದ್ದರು. 1998ರಲ್ಲಿ ಶಾಲಾ ಸುವರ್ಣಮಹೋತ್ಸವವನ್ನು ವಿಜೃಂಬಣೆಯಿಂದ ಆಚಾರಿಸಲಾಗಿತ್ತು. ಇದೀಗ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ವಿದ್ಯಾಸಂಸ್ಥೆ ಸುಸಜ್ಜತ ಕಟ್ಟಡದಲ್ಲಿ ಕಾರ್ಯವೆಸಗುತ್ತಿದೆ. ಒಟ್ಟು 6 ಶಿಕ್ಷಕರು ಸೇವೆಗೂಯುತ್ತಿದ್ದು100 ವಿದ್ಯಾರ್ಥಿಗಳು ವಿದ್ಯಾರ್ಜನೆ ಗೈಯುತ್ತಿದ್ದಾರೆ.
ಶಾಲೆಗೆ ಅಮೃತ ಸಿಂಚನ :
2023 ವಾಣೀವಿಲಾಸ ಕಿರಿಯ ಪ್ರಾಥಮಿಕ ಶಾಲೆ ತೊಟ್ಟೆತ್ತೋಡಿ ವಿದ್ಯಾ ದೇಗುಲದ ಅಮೃತ ಮಹೋತ್ಸವ ವರ್ಷ. 75 ರ್ವಗಳ ಸುದೀರ್ಘ ವಿದ್ಯಾ ಸೇವೆಯ ಸಾರ್ಥಕತೆಯನ್ನು ಸ್ಮರಣೀಯಗೊಳಿಸುವ ಸಲುವಾಗಿ ಮಾರ್ಚ್ 2023ರಲ್ಲಿ ಅಮೃತಮಹೋತ್ಸವವನ್ನು ಸಡಗರದಿಂದ ಅರ್ಥವತ್ತಾಗಿ ಆಚರಿಸಲು ಶಾಲಾ ವ್ಯವಸ್ಥಾಪಕರು, ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕವೃಂದ, ವಿದ್ಯಾರ್ಥಿಗಳ ಪೋಷಕರು , ಹಳೇವಿದ್ಯಾರ್ಥಿಗಳು ಹಾಗೂ ನಾಡಿನ ವಿದ್ಯಾ ಪ್ರೇಮಿಗಳು ಸೇರಿ ನಿರ್ಧರಿಸಿರುತ್ತಾರೆ. ಹಾಗೂ ದೇವದಾಸ ಶೇನವ ದೇರಂಬಳ ಅವರ ಗೌರವಾಧ್ಯಕ್ಷ, ಜನಾಬ್ ಮಹಮ್ಮದ್ ಹಾಜಿ ಚಿನಾಲ ಅಧ್ಯಕ್ಷ, ದಿನೇಶ್ ರೈ ಕಳ್ಳಿಗೆ ಕಾರ್ಯಾಧ್ಯಕ್ಷರಾಗಿರುವ ಸಮಿತಿಯನ್ನು ರೂಪೀಕರಿಸಲಾಗಿದೆ.
ಅಮೃತ ಮಹೋತ್ಸವ ನೆನಪಲ್ಲಿ ಶಾಲಾ ವಿದ್ಯಾರ್ಥಿಗಳ ಮದ್ಯಾಹ್ನದ ಭೊಜನ ವ್ಯವಸ್ಥೆಗೆ ಅನುಕೂಲವಾಗುವಂತೆ ಸುಸಜ್ಜಿತ ಭೋಜನಗೃಹವೊಂದನ್ನು ಸುಮಾರು ರೂಪಾಯಿ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಸಮರ್ಪಿಸಲು ತೀರ್ಮಾನಿಸಲಾಗಿದೆ.
ಮಾರ್ಚ್ 11ರಂದು ದಿನಪೂರ್ತಿ ಅಮೃತಮಹೋತ್ಸವ ಕಾರ್ಯಕ್ರಮ ಜರಗಲಿದ್ದು ನಾಡಿನ ಅನೇಕ ಗಣ್ಯರು, ಹಳೆವಿದ್ಯಾರ್ಥಿಗಳು, ವಿದ್ಯಾಪ್ರೇಮಿಗಳು ಭಾಗವಹಿಸಲಿದ್ದಾರೆ.
ಅಮೃತ ಮಹೋತ್ಸವ ಸಂಭ್ರಮದಲ್ಲಿ ತೊಟ್ಟೆತ್ತೋಡಿ ವಾಣೀವಿಲಾಸ ಕಿರಿಯ ಪ್ರಾಥಮಿಕ ಶಾಲೆ
0
ಮಾರ್ಚ್ 02, 2023