ಕಾಸರಗೋಡು: ನಗರಸಭೆಯ 2023-24ನೇ ಸಾಲಿನ ಆಯವ್ಯಯ ಮಂಡನಾ ಸಭೆ ನಗರಸಭಾಂಗಣದಲ್ಲಿ ಜರುಗಿತು. ಮೂಲಸೌಕರ್ಯಕ್ಕೆ ಆದ್ಯತೆ ಕಲ್ಪಿಸುವುದರೊಂದಿಗೆ ಮಿಗತೆ ಬಜೆಟನ್ನು ನಗರಸಭಾ ಉಪಾಧ್ಯಕ್ಷೆ ಶಂಸೀರಾ ಫಿರೋಸ್ ಮಂಡಿಸಿದರು. ಒಟ್ಟು 57.54ಕೋಟಿ ರೂ. ಆದಾಯ ಮತ್ತು 51.98ಕೋಟಿ ರೂ. ಖರ್ಚು ಹೊಂದಿರುವ ಬಜೆಟ್ ಇದಾಗಿದೆ.
ನಗರದ ಬೀದಿ ದೀಪಗಳ ಅಳವಡಿಕೆ ಹಾಗೂ ನಿರ್ವಹಣೆಗಾಗಿ 25ಲಕ್ಷ ರೂ. ಮೀಸಲಿರಿಸಲಾಗಿದೆ. ನಗರಸಭಾ ವ್ಯಾಪ್ತಿಯ ವಾರ್ಡುಗಳಲ್ಲಿ ಬೀದಿದೀಪ ಅಳವಡಿಕೆ ಹಾಗೂ ನಿರ್ವಹಣೆಗೆ 75ಲಕ್ಷ, ನೆಲ್ಲಿಕುಂಜೆ ಕಡಪ್ಪುರ ಶುದ್ಧ ನೀರು ವಿತರಣೆಗೆ 1.33ಕೋಟಿ, ಕೃಷಿ ವಲಯದ ಅಭಿವೃದ್ಧಿಗೆ ಹಾಗೂ ಕ್ರಷಿ ಉತ್ಸವಕ್ಕಾಗಿ 47ಲಕ್ಷ ರೂ, ವಿವಿಧ ಆಸ್ಪತ್ರೆಗಳಿಗೆ ಔರ್ಷ ಖರೀದಿಗಾಗಿ 43ಲಕ್ಷ ರೂ, ನೆಲ್ಕಳ ಕಾಲನಿ ರಸ್ತೆ, ಕಾಲನಿ ಮನೆಗಳ ಅಂಚಿಗೆ ತಡೆಗೋಡೆ ನಿರ್ಮಾಣಕ್ಕೆ 14ಲಕ್ಷ ರೂ., ದೈಹಿಕ-ಮಾನಸಿಕ ಸವಾಲು ಎದುರಿಸುವವರಿಗೆ 26ಲಕ್ಷ ರೂ. ಮೀಸಲಿರಿಸಲಾಗಿದೆ. ನಗರಸಭಾ ಅಧ್ಯಕ್ಷ ವಿ.ಎಂ ಮುನೀರ್ ಅಧ್ಯಕ್ಷತೆ ವಹಿಸಿದ್ದರು.
ಕಾಸರಗೋಡು ನಗರಸಭಾ ಬಜೆಟ್: ಮೂಲಸೌಕರ್ಯಕ್ಕೆ ಆದ್ಯತೆ
0
ಮಾರ್ಚ್ 24, 2023
Tags