ಕೊಚ್ಚಿ: ಸಾವಿಗೂ ಮುನ್ನ ಸಲ್ಲಿಸಿದ್ದ ಅರ್ಜಿಗೆ ಆತನ ಸಾವಿನ ಬಳಿಕ ಸರ್ಕಾರ ನಿರ್ಧಾರ ಕೈಗೊಂಡಿದೆ. ಮೃತರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೂ ಆರ್ಥಿಕ ನೆರವು ನೀಡಲಾಗಿದೆ.
ಎರ್ನಾಕುಳಂ ನೋರ್ತ್ ಪರವೂರ್ ಎಂ.ಪಿ. ಮುರಳಿಗೆ 35,000 ರೂ. ಅನುಮತಿಸಲಾಗಿದೆ. ಮುರಳಿ ಸಾವಿಗೂ ಮುನ್ನ ಅರ್ಜಿ ಸಲ್ಲಿಸಿದ್ದರು. ಈ ಹಣ ಸಿಕ್ಕಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ಹುರಿಹಗ್ಗ ಕಾರ್ಮಿಕರಾಗಿದ್ದ ಮುರಳಿ ಡಿಸೆಂಬರ್ 29ರಂದು ಮೂತ್ರಪಿಂಡ ಕಾಯಿಲೆಯಿಂದ ಮೃತಪಟ್ಟಿದ್ದರು. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮುರಳಿ ಅವರ ಹೆಸರಿನಲ್ಲಿ ಚಿಕಿತ್ಸೆಗೆ ಹಣವಾಗಿ 35 ಸಾವಿರ ರೂ.ಬಂದಿರುವ ಸೂಚನೆ ಬಂತು. ಆದರೆ ಮುರಳಿ ಸಾವಿಗೂ ಮುನ್ನ ಅರ್ಜಿ ಸಲ್ಲಿಸಿದ್ದು, ಹಣ ಅಂದು ಬಂದಿರಲಿಲ್ಲ ಎನ್ನುತ್ತಾರೆ ಕುಟುಂಬದವರು. ಇದರ ಬೆನ್ನಲ್ಲೇ ವಿಜಿಲೆನ್ಸ್ ಈ ಬಗ್ಗೆ ತನಿಖೆ ನಡೆಸಿ ಭ್ರμÁ್ಟಚಾರ ನಡೆದಿರುವುದನ್ನು ಸ್ಪಷ್ಟಪಡಿಸಲಿದೆ.
ಮುರಳಿ ಡಿಸೆಂಬರ್ 29 ರಂದು ನಿಧನರಾದರು. ಅನುದಾನಕ್ಕಾಗಿ ಡಿಸೆಂಬರ್ 30ರಂದು ಅರ್ಜಿ ಸಲ್ಲಿಸಿರುವುದಾಗಿ ದಾಖಲಾಗಿದೆ. ಮರಣದ ಒಂದು ದಿನದ ನಂತರ ಅರ್ಜಿ ಸಲ್ಲಿಸಲಾಗಿದೆ. ಕೊನೆಗೆ ಕಂದಾಯ ಅಧಿಕಾರಿಗಳು ನೀಡಿದ ಶಿಫಾರಸಿನಂತೆ ಮೃತ ಮುರಳಿಗೆ 35 ಸಾವಿರ ರೂ. ಮುರಳಿ ಸಾವಿನ ನಂತರ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ್ದರು ಎಂದು ವಿಜಿಲೆನ್ಸ್ ಹೇಳಿಕೊಂಡಿದೆ. ಸದ್ಯ ವಿಜಿಲೆನ್ಸ್ ಕಂದಾಯ ಅಧಿಕಾರಿಗಳ ಲೋಪ ಮತ್ತು ಭ್ರμÁ್ಟಚಾರ ನಡೆದಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದೆ.
ಬಯಲಾಗುತ್ತಿದೆ ಹಗರಣ! ಪರಿಹಾರ ನಿಧಿಯಿಂದ ಮೃತರಿಗೆ ಆರ್ಥಿಕ ನೆರವು
0
ಮಾರ್ಚ್ 01, 2023