ಚಂಡೀಗಢ (PTI): ಕ್ರೌರ್ಯದಿಂದ ಕೂಡಿದ ದಾಳಿ ಪ್ರಕರಣದ ಆರೋಪಿಗೆ ಜಾಮೀನು ನೀಡುವ ವಿಚಾರದಲ್ಲಿ ಜಗತ್ತಿನಾದ್ಯಂತ ಅನುಸರಿಸಲಾಗುತ್ತಿರುವ ಕ್ರಮದ ಕುರಿತ ಮಾಹಿತಿಗಾಗಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 'ಚಾಟ್‌ಜಿಪಿಟಿ'ಯ (ಕೃತಕ ಬುದ್ದಿಮತ್ತೆ) ನೆರವು ಪಡೆದಿದೆ.
ಭಾರತದ ನ್ಯಾಯಾಂಗ ವ್ಯವಸ್ಥೆಯ ಮಟ್ಟಿಗೆ ಇದು ಹೊಸ ಪ್ರಯತ್ನವಾಗಿದೆ.
ಕೊಲೆ ಪ್ರಕರಣದ ಆರೋಪಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಅನೂಪ್ ಚಿತ್ಕಾರ್, 'ಇಂತಹ ಪ್ರಕರಣದಲ್ಲಿ ವಿಶ್ವದ ಇತರೆ ದೇಶಗಳಲ್ಲಿ ಅನುಸರಿಸುವ ಕ್ರಮದ ಕುರಿತ ವಿವರವಾದ ಮಾಹಿತಿ ಪಡೆಯುವುದಕ್ಕಾಗಿ 'ಚಾಟ್‌ಜಿಪಿಟಿ'ಯ ಮೊರೆ ಹೋಗಲಾಯಿತು' ಎಂದಿದ್ದಾರೆ.
ಆರೋಪಿಯ ಜಾಮೀನು ಅರ್ಜಿಯನ್ನೂ ಅವರು ವಜಾಗೊಳಿಸಿದ್ದಾರೆ.