ಬದಿಯಡ್ಕ: ಗೋಳಿಯಡ್ಕ ಶ್ರೀವಿಷ್ಣುಮೂರ್ತಿ, ಶ್ರೀಮೋಗೇರ ದೈವ, ಕೋಮರಾಯ ಚಾಮುಂಡಿ ಪರಿವಾರ ದೈವಗಳ ಪ್ರತಿಷ್ಠಾ ಮಹೋತ್ಸವ ಜರಗಿತು.
ಕಾರ್ಯಕ್ರಮದ ಅಂಗವಾಗಿ ಪುರೋಹಿತ ವೇದಮೂರ್ತಿ ಶಿವರಾಮ ಭಟ್ ಪೆರಡಾಲ ಅವರ ನೇತೃತ್ವದಲ್ಲಿ ಗಣಪತಿ ಹವನ, ಶ್ರೀಸತ್ಯನಾರಾಯಣ ಪೂಜೆ ಸಹಿತ ಪ್ರತಿಷ್ಠಾ ವೈದಿಕ ಕಾರ್ಯಗಳು ಜರಗಿತು.
ಪಚ್ಲಂಪಾರೆ ಬ್ರಹ್ಮಶ್ರೀ ಮೋಗೆರ ದೈವಸ್ಥಾನದ ಧರ್ಮದರ್ಶಿ ಬಾಬು ಯು ಪಚ್ಲಂಪಾರೆ ನೇತೃತ್ವದಲ್ಲಿ ಕರ್ಮಿ ಬಾಲಕೃಷ್ಣ, ಗುರುವ, ಬಾಬು ಗೋಳಿಯಡ್ಕ, ಸುಂದರ ಗುರಿಕ್ಕಾರರ ಮೂಲಕ ಪ್ರತಿಷ್ಠೆ ನಡೆಯಿತು.
ಬಳಿಕ ಆರ್ಟ್ ಆಫ್ ಲಿವಿಂಗ್ ಬೇಳ, ಮಧೂರು ಶ್ರೀಮದರುಮಹಾಮಾತೆ ಭಜನಾ ಸಂಘದವರಿಂದ ಭಜನಾ ಸೇವೆ ಜರಗಿತು. ಮಧ್ಯಾಹ್ನ ಗುಳಿಗನ ಕೋಲ ನಡೆಯಿತು.