ಕಾಸರಗೋಡು: ಮಾದಕ ದ್ರವ್ಯ ವ್ಯಸನ ನಮ್ಮ ದೇಶದ ಎಲ್ಲಾ ಮೂಲೆಗೂ ಆವರಿಸಿದ್ದು, ಭವಿಷ್ಯದಲ್ಲಿ ಭಾರಿ ದುರಂತ ತಂದೊಡ್ಡಲಿದ್ದು, ಇದರ ವಿರುದ್ಧ ಮಹಿಳೆಯರು ಮುಂಚೂಣಿಯಲ್ಲಿದ್ದು ಹೋರಾಟ ನಡೆಸುವುದು ಅನಿವಾರ್ಯ ಎಂದು ನೀಲೇಶ್ವರ ರಾಜಾಸ್ ಪ್ರೌಢಶಾಲೆಯ ಶಿಕ್ಷಕಿ ಟಿ. ಸುಧಾಮಣಿ ತಿಳಿಸಿದ್ದಾರೆ.
ಅವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಾಸರಗೋಡಿನ ಭಾರತೀಯ ಮಜ್ದೂರ್ ಸಂಘದ ಮಹಿಳಾ ವಿಭಾಗದ ಆಶ್ರಯದಲ್ಲಿ ಕಾಸರಗೋಡಿನಲ್ಲಿ ಆಯೋಜಿಸಲಾಗಿದ್ದ ಮಹಿಳಾ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷೆ ಗೀತಾ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಅಬಕಾರಿ ಪ್ರಿವೆಂಟಿವ್ ಅಧಿಕಾರಿ ಎನ್.ಜಿ.ರಘುನಾಥನ್ ಮಾದಕ ವಸ್ತು ವಿರೋಧಿ ಜಾಗೃತಿ ಬಗ್ಗೆ ತರಗತಿ ನಡೆಸಿದರು. ಬಿ.ಎಂ.ಎಸ್.ಜಿಲ್ಲಾ ಸಮಿತಿ ಕರ್ಯದರ್ಶಿ ವಿ. ಗೋವಿಂದನ್ ಮಡಿಕೈ ಮಹಿಳಾ ದಿನಾಚರಣೆ ಸಂದೇಶ ಭಾಷಣ ಮಾಡಿದರು. ಉದ್ಘಾಟಿಸಿದರು. ಬಿಎಂಎಸ್ ಜಿಲ್ಲಾಧ್ಯಕ್ಷ ವಿ.ವಿ.ಬಾಲಕೃಷ್ಣನ್, ಬಿಎಂಎಸ್ ಜಿಲ್ಲಾ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು, ಮಹಿಳಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಿಂಧು ಮನೋರಾಜ್ ಸ್ವಾಗತಿಸಿದರು. ಶೋಭಾ ಬಾಲರಾಜ್ ವಂದಿಸಿದರು.
ಮಾದಕ ದ್ರವ್ಯ ಮುಕ್ತ ಸಮಾಜಕ್ಕೆ ಮಹಿಳೆಯರು ಮುಂದಾಗಬೇಕು-ಟಿ. ಸುಧಾಮಣಿ
0
ಮಾರ್ಚ್ 10, 2023
Tags