ಕಾಸರಗೋಡು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾಸರಗೋಡು ಜಿಲ್ಲಾ ಕಛೇರಿಯಲ್ಲಿ ಕಮರ್ಷಿಯಲ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಯಾವುದೇ ಸರ್ಕಾರಿ ಮಾನ್ಯತೆ ಪಡೆದ ಸಂಸ್ಥೆಯಿಂದ ಪಿಜಿಡಿಸಿಎ ಮತ್ತು ಕಂಪ್ಯೂಟರ್ ಅಪ್ಲಿಕೇಶನ್‍ನಲ್ಲಿ ಡಿಪೆÇ್ಲಮಾ ಪಡೆದಿರಬೇಕು. ಜನವರಿ ಒಂದು 2023 ರಕ್ಕೆ 26 ವರ್ಷಗಳನ್ನು ಮೀರಬಾರದು. ಮಾಸಿಕ 9000 ರೂ. ಸ್ಟೈಫಂಡ್ ನೀಡಲಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಸ್ವವಿವರ, ಮೂಲ ಪ್ರಮಾಣಪತ್ರಗಳು , ಅವುಗಳ ನಕಲು ಪ್ರತಿ ಮತ್ತು ಒಂದು ಪಾಸ್‍ಪೆÇೀರ್ಟ್ ಅಳತೆಯ ಭಾವಚಿತ್ರದೊಂದಿಗೆ ಮಾರ್ಚ್ 28 ರಂದು ಬೆಳಿಗ್ಗೆ 11 ಗಂಟೆಗೆ ಅಥವಾ ಮೊದಲು ಕಾಂಞಂಗಾಡ್ ರೈಲ್ವೆ ನಿಲ್ದಾಣದ ಬಳಿ ಇರುವ ಮಂಡಳಿಯ ಕಾಸರಗೋಡು ಜಿಲ್ಲಾ ಕಛೇರಿಗೆ ತಲುಪಬೇಕು. ಈ ಹಿಂದೆ ಮಂಡಳಿಯಲ್ಲಿ ಅಪ್ರೆಂಟಿಸ್ ತರಬೇತಿ ಪಡೆದವರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ವೆಬ್‍ಸೈಟ್ hಣಣಠಿs://ಞsಠಿಛಿb.ಞeಡಿಚಿಟಚಿgov.iಟಿ ಫೆÇೀನ್ 04672 201180
ಕಮರ್ಷಿಯಲ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ
0
ಮಾರ್ಚ್ 20, 2023