ಕಾಸರಗೋಡು: ಲಾಟರಿ ಕಾರ್ಮಿಕರ ವಂಚನೆ ಖಂಡಿಸಿ ಕೇರಳದ ಲಾಟರಿ ಏಜೆಂಟರು ಮತ್ತು ಮಾರಾಟಗಾರರ ಸಂಘ (ಐಎನ್‍ಟಿಯುಸಿ) ರಾಜ್ಯಾದ್ಯಂತ ಪ್ರತಿಭಟನೆ ಆರಂಭಿಸಿದೆ. ಚೆರ್ಕಳದಲ್ಲಿ ನಡದ ಸಮಾರಂಭದಲ್ಲಿ ಲಾಟರಿ ಏಜೆಂಟ್‍ಮತ್ತು ಮಾರಾಟಗಾರರ ಸಂಘದ (ಐಎನ್‍ಟಿಯುಸಿ) ರಾಜ್ಯಾಧ್ಯಕ್ಷ ಥಾಮಸ್ ಕಲ್ಲಾಡನ್ ಅವರಿಗೆ ಮಾಜಿ ಗೃಹ ಸಚಿವ ತಿರುವಂಜೂರು ರಾಧಾಕೃಷ್ಣನ್ ಅವರು ಧ್ವಜವನ್ನು ಹಸ್ತಾಂತರಿಸಿ ಪ್ರತಿಭಟನಾ ಜಾಥಾ ಉದ್ಘಾಟಿಸಿದರು.
ಥಾಮಸ್ ಕಲ್ಲಾಡನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಾಥಾದ ಸದಸ್ಯರಾದ ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್, ಮಾಜಿ ಸಚಿವ ಸಿ.ಟಿ.ಅಹಮದ್ ಅಲಿ, ಶಾಸಕ ಎನ್.ಎ.ನೆಲ್ಲಿಕುನ್ , ಬಾಲಕೃಷ್ಣನ್ ಪೆರಿಯ, ಸಿ.ವಿ.ಜೇಮ್ಸ್, ರಾಜ್ಯ ಉಪಾಧ್ಯಕ್ಷ ಬಿ.ಎ.ಇಸ್ಮಾಯಿಲ್, ಶಾಹುಲ್ ಹಮೀದ್.ಲೇಜೀವ್ ವಿಜಯನ್, ಕೆ.ಜಿ.ಹರಿದಾಸ್, ರಾಜೀವ್ ಕೊಟ್ಟಾಯಂ, ಸುನಿಲ್ ತೆರೆಮಕ್ಕಲ್, ಸಾಕಿರ್ ತೆಂಗಂಪಲ್ಲಿ, ಶಾಜಿ ವೆಲ್ಲೂರು ಉಪಸ್ಥಿತರಿದ್ದರು.
ಲಾಟರಿ ಏಜೆಂಟರು ಮತ್ತು ಮಾರಾಟಗಾರರ ಸಂಘ (ಐಎನ್‍ಟಿಯುಸಿ) ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಜೇಮ್ಸ್ ಅಧಿಕಾರಂ ಸ್ವಾಗತಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಅರ್ಜುನ್ ತಾಯಲಂಗಡಿ ವಂದಿಸಿದರು.
ಲಾಟರಿ ಕಾರ್ಮಿಕರ ವಂಚನೆ ವಿರೋಧಿಸಿ ರಾಜ್ಯವ್ಯಾಪಿ ಪ್ರತಿಭಟನಾ ಜಾಥಾ-ಚೆರ್ಕಳದಲ್ಲಿ ತಿರುವಂಜೂರ್ ರಾಧಾಕೃಷ್ಣನ್ ಚಾಲನೆ
0
ಮಾರ್ಚ್ 06, 2023
Tags