ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ವಿರುದ್ಧ ಕೇರಳ ಸಕಾರ ತೋರುವ ನಿರ್ಲಕ್ಷ್ಯ ಧೋರಣೆ ಖಂಡಿಸಿ ಕಾಂಗ್ರೆಸ್ ನೇತೃತ್ವದ ಐಕ್ಯರಂಗ ವತಿಯಿಂದ ಕಾಸರಗೋಡು ಬ್ಲಾಕ್ ಪಂಚಾಯಿತಿ ಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು. ಐಕ್ಯರಂಗ ರಾಜ್ಯವ್ಯಾಪಕವಾಗಿ ಸ್ಥಳೀಯಾಡಳಿತ ಸಂಸ್ಥೆಗಳ ಎದುರು ಆಯೋಜಿಸಿದ್ದ ಧರಣಿ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಧರಣಿ ಆಯೋಜಿಸಲಾಗಿತ್ತು.
ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಧರಣಿ ಉದ್ಘಾಟಿಸಿದರು. ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸೈಮಾ ಸಿ.ಎ ಅಧ್ಯಕ್ಷತೆ ವಹಿಸಿದ್ದರು. . ಬ್ಲಾಕ್ ಪಂಚಾಯತ್ ಪ್ರತಿನಿಧಿಗಳಾದ ಸಮೀಮಾ ಅನ್ಸಾರಿ, ಸಕೀನಾ ಅಬ್ದುಲ್ಲಾ, ಬದರುಲ್ ಮುನೀರ್, ಜೇಮ್ಸ್ ಸಿ.ವಿ, ಜಮೀಲಾ ಅಹ್ಮದ್, ಕಲಾಭವನ್ ರಾಜು ಮತ್ತು ಸೀನತ್ ನಸೀರ್ ಉಪಸ್ಥಿತರಿದ್ದರು.
ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಅಶ್ರಫ್ ಕಾರ್ಲ ಸ್ವಾಗತಿಸಿದರು.
ಸ್ಥಳೀಯಾಡಳಿತ ಸಂಸ್ಥೆಗಳ ಅವಗಣನೆ-ಐಕ್ಯರಂಗದಿಂದ ಧರಣಿ
0
ಮಾರ್ಚ್ 31, 2023