ಹಿಂದೆಯೆಲ್ಲಾ ಮಣ್ಣಿನ ಪಾತ್ರೆಯನ್ನೇ ಅಡುಗೆಗೆ, ನೀರು ತುಂಬಿಡಲು ಬಳಸುತ್ತಿದ್ದರು, ಕಾಲ ಕ್ರಮೇಣ ಮಣ್ಣಿನ ಪಾತ್ರೆಗಳ ಬದಲಿಗೆ ಸ್ಟೀಲ್‌ಪಾತ್ರೆಗಳು ಬಂದವು. ಆದರೆ ಈಗ ಬಹುತೇಕ ಜನರಿಗೆ ಮಣ್ಣಿನ ಪಾತ್ರೆಯ ಪ್ರಾಮುಖ್ಯತೆ ಗೊತ್ತಾಗಿದೆ, ಈ ಕಾರಣದಿಂದ ಮತ್ತೆ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗಿದೆ.
ಮಣ್ಣಿನ ಮಡಿಕೆಯಲ್ಲಿರುವ ನೀರು ಬಳಸುವುದು, ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವುದು ಹೀಗೆ ಜನರು ಆರೋಗ್ಯಕರ ವಿಷಯಗಳತ್ತ ಗಮನ ನೀಡುತ್ತಿದ್ದಾರೆ.
ನಾವಿಲ್ಲಿ ಮಣ್ಣಿನ ಮಡಿಕೆಯಲ್ಲಿರುವ ನೀರು ಕುಡಿಯುವುದರಿಂದ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿಯೋಣ:
ಫ್ರಿಡ್ಜ್‌ನಲ್ಲಿಟ್ಟ ನೀರು ಒಳ್ಳೆಯದಲ್ಲ, ಅದೇ ಮಣ್ಣಿನ ಮಡಿಕೆಯಲ್ಲಿರುವ ನೀರು ಆರೋಗ್ಯಕರ
ಬೇಸಿಗೆಯಲ್ಲಿ ತಂಪಾದ ನೀರು ಕುಡಿಯಬೇಕೆನಿಸುವುದು. ಮಣ್ಣಿನ ಪಾತ್ರೆಯಲ್ಲಿ ನೀರು ಇಟ್ಟರೂ ತುಂಬಾ ತಂಪಾಗಿರುತ್ತದೆ. ಹೆಚ್ಚಿನವರು ತಣ್ಣನೆಯ ನೀರು ಕುಡಿಯಬೇಕೆಂದು ಫ್ರಿಡ್ಜ್‌ನಲ್ಲಿಟ್ಟು ಕುಡಿಯುತ್ತಾರೆ. ಆದರೆ ಫ್ರಿಡ್ಜ್‌ನಲ್ಲಿಟ್ಟ ತಣ್ಣನೆಯ ನೀರು ಕುಡಿದರೆ ಗಂಟಲು ನೋವು, ಗಂಟಲು ಕೆರೆತ ಈ ಬಗೆಯ ಸಮಸ್ಯೆಗಳು ಕಂಡು ಬರುವುದು. ಅದೇ ಮಡಿಕೆಯಲ್ಲಿಟ್ಟ ನೀರು ಕುಡಿದರೆ ನೀರು ತಂಪಾಗಿರುತ್ತದೆ, ಜೊತೆಯೂ ರುಚಿಯು ಇರುತ್ತದೆ.
ನೀರನ್ನು ಶುದ್ಧೀಕರಿಸುತ್ತದೆ, ಈ ನೀರಿನಲ್ಲಿ ವಿಟಮಿನ್‌ಗಳಿರುತ್ತದೆ
ಆರ್‌ಓ ನೀರಿನಲ್ಲಿ ವಿಟಮಿನ್‌ಗಳಿರುತ್ತದೆ, ಅದೇ ಮಣ್ಣಿನ ಮಡಿಕೆಯಲ್ಲಿ ನೀರನ್ನಯ ಕುಡಿಯುವುದರಿಂದ ಆ ನೀರು ಶುದ್ಧವಾಗಿಯೂ ಇರುತ್ತದೆ ಅಲ್ಲದೆ ಆ ನೀರಿನಲ್ಲಿ ವಿಟಮಿನ್‌ಗಳು ನಷ್ಟವಾಗುವುದಿಲ್ಲ.
ನೀರಿನಲ್ಲಿರುವ ಕಶ್ಮಲಗಳು ಮಣ್ಣಿನ ಪಾತ್ರೆಯಲ್ಲಿ ಹಾಕಿದ ನೀರಿನಲ್ಲಿ ಇರುವುದಿಲ್ಲ.
ಸನ್‌ಸ್ಟ್ರೋಕ್ ತಡೆಗಟ್ಟುತ್ತದೆ
ಬಿಸಿಲು ಅಧಿಕವಿರುವಾಗ ಓಡಾಡಿದರೆ ಸನ್‌ಸ್ಟ್ರೋಕ್ ಉಂಟಾಗುವುದು. ಮಣ್ಣಿನ ಮಡಿಕೆಯಲ್ಲಿಟ್ಟ ನೀರು ಕುಡಿಯುವುದರಿಂದ ಸನ್‌ಸ್ಟ್ರೋಕ್ ತಡೆಗಟ್ಟಲು ಸಹಕಾರಿ. ಏಕೆಂದರೆ ಇದರಲ್ಲಿ ಖನಿಜಾಂಶಗಳು ದೇಹದಲ್ಲಿ ನೀರಿನಂಶ ಇರುವಂತೆ ನೀಡಿಕೊಳ್ಳುತ್ತದೆ ಜೊತೆಗೆ ಆರೋಗ್ಯ ಕೂಡ ವೃದ್ಧಿಸುತ್ತದೆ.
ಸುಸ್ತಾಗಿರುವಾಗ ಈ ನೀರನ್ನುಕುಡಿದರೆ ಬೇಗನೆ ಸುಸ್ತು ಮಾಯವಾಗುವುದು.
ಚಯಪಚಯ ಕ್ರಿಯೆಗೆ ಒಳ್ಳೆಯದು
ಮಣ್ಣಿನ ಮಡಿಕೆಯಲ್ಲಿರುವ ನೀರು ಕುಡಿಯುವುದರಿಂದ ಚಯಪಚಯ ಕ್ರಿಯೆಗೆ ತುಂಬಾ ಒಳ್ಳೆಯದು, ಜೀರ್ಣಕ್ರಿಯೆ ಚೆನ್ನಾಗಿ ನಡೆಯುವುದು. ದೇಹದಲ್ಲಿ ಖನಿಜಾಂಶಗಳ ಕಡಿಮೆಯಾದರೆ ಆರೋಗ್ಯ ಸಮಸ್ಯೆ ಉಂಟಾಗುವುದು. ಅದೇ ಮಣ್ಣನ ಪಾತ್ರೆಯಲ್ಲಿ ನೀರನ್ನು ಕುಡಿದರೆ ಈ ಸಮಸ್ಯೆ ಇರುವುದಿಲ್ಲ.
ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ತಡೆಗಟ್ಟುತ್ತದೆ
ಕೆಲವೊಂದು ಆಹಾರಗಳು ಅಸಿಡಿಟಿ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಉಂಟು ಮಾಡುತ್ತದೆ. ಮಣ್ಣಿನ ಮಡಿಕೆಯ ನೀರು ಕುಡಿಯುವುದರಿಂದ ಅಸಿಡಿಟಿ, ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುವುದು.
ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಈ ನೀರನ್ನೇ ಕುಡಿದರೆ ಒಳ್ಳೆಯದು.
ಇದರಲ್ಲಿ ರಾಸಾಯನಿಕಗಳಿರುವುದಿಲ್ಲ
ಮಣ್ಣಿನ ಮಡಿಕೆಯಲ್ಲಿರುವ ನೀರು ಶುದ್ಧವಾಗಿರುತ್ತದೆ. ಈ ನೀರಿನಲ್ಲಿ ಯಾವುದೇ ರಾಸಾಯನಿಕಗಳಿರುವುದಿಲ್ಲ. ಮಣ್ಣಿನ ಪಾತ್ರೆ ನೀರನ್ನು ಶುದ್ಧೀಕರಿಸುವುದರಿಂದ ಈ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿಯುವುದರಿಂದ ಅಪಾಯಗಳೇನು?
* ಹೃದಯ ಬಡಿತ ನಿಧಾನವಾಗುವುದು
* ಮಲಬದ್ಧತೆ ಸಮಸ್ಯೆ ಉಂಟಾಗುವುದು
* ಮೈಯಲ್ಲಿ ಕೊಬ್ಬು ಸಂಗ್ರಹವಾಗುವುದು
* ತಲೆನೋವು ಈ ಬಗೆಯ ಸಮಸ್ಯೆ ಕಂಡು ಬರುವುದು. ಆದ್ದರಿಂದ ಫ್ರಿಡ್ಜ್‌ನಲ್ಲಿರುವ ನೀರಿಗಿಂತ ಮಣ್ಣಿನ ಮಡಿಕೆಯಲ್ಲಿರುವ ನೀರು ತುಂಬಾನೇ ಆರೋಗ್ಯಕರ.
ನೀವು ಮಜ್ಜಿಗೆಯನ್ನು ಕೂಡ ಮಣ್ಣಿನ ಮಡಿಕೆಯಲ್ಲಿ ಇಡಬಹುದು
ಬೇಕಾಗುವ ಸಾಮಗ್ರಿ
ಅರ್ಧ ಲೀಟರ್ ಮೊಸರು
ಒಂದೂವರೆ ಲೀಟರ್ ಮೊಸರು
1 ಚಮಚ ಜೀರಿಗೆ ಪುಡಿ
ಸ್ವಲ್ಪ ಉಪ್ಪು
1 ಚಮಚ ನಿಂಬೆಸ
ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ನೀರು ಹಾಗೂ ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮೊಸರಿನ ಗಟ್ಟಿ ಕರಗುವಂತೆ ಮಿಕ್ಸ್ ಮಾಡಿ (ಬೇಕಿದ್ದರೆ ಮಿಕ್ಸಿಯಲ್ಲಿ ರುಬ್ಬಿ ಹಾಕಬಹುದು)
* ಈಗ ಮೊಸರಿಗೆ ಜೀರಿಗೆ ಪುಡಿ, ಉಪ್ಪು, ನಿಂಬೆ ರಸ ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ.
* ಈಗ ಮೊಸರನ್ನು ಮಣ್ಣಿನ ಮಡಿಕೆಯಲ್ಲಿ ಹಾಕಿಡಿ.
ಮಜ್ಜಿಗೆಯನ್ನು ಬೆಳಗ್ಗೆ ರೆಡಿ ಮಾಡಿ ಮಣ್ಣಿನ ಮಡಿಕೆಯಲ್ಲಿ ಇಟ್ಟರೆ ಮಧ್ಯಾಹ್ನ ನೀವು ತಂಪಾದ ಮಜ್ಜಿಗೆ ಸವಿಯಬಹುದು. ಇನ್ನು ಬೇಸಿಗೆಯಲ್ಲಿ ಮಜ್ಜಿಗೆ ನಿಮಗೆ ಬೇಕಾದ್ಷಟು ತಯಾರಿಸಿ ಇಟ್ಟರೆ ಮನೆಗೆ ಬಂದ ಅತಿಥಿಗಳಿಗೆ ಸರ್ವ್ ಮಾಡಬಹುದು.