ಮುಂಬೈ: ಬಾಬುಲನಾಥ ದೇವಾಲಯವು ಮುಂಬೈನ ಅತ್ಯಂತ ಪುರಾತನ ಮತ್ತು ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿ ದಿನ ಹಲವಾರು ಭಕ್ತರು ತಮ್ಮ ಹರಕೆಯನ್ನು ಅರ್ಪಿಸಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಬಾಬುಲನಾಥಕ್ಕೆ ಭಕ್ತರನ್ನು ಸೆಳೆಯುವ ಪ್ರಮುಖ ಕಾರಣವೆಂದರೆ ಅದು ಹೊಂದಿರುವ ಹಳೆಯ ಶಿವಲಿಂಗ. ದೂರದೂರುಗಳಿಂದ ಭಕ್ತರು ಆಗಮಿಸಿ ಪುಣ್ಯಸ್ಮರಣೆ ಮಾಡುತ್ತಾರೆ. ಈ ಶಿವಲಿಂಗವು ಬಿರುಕು ಮೂಡಿದೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಮೊದಲ ಬಾರಿಗೆ ಬಿರುಕುಗಳು ಪತ್ತೆಯಾದಾಗ, ದೇವಸ್ಥಾನದ ಟ್ರಸ್ಟಿಗಳು ತಜ್ಞರ ಸಹಾಯವನ್ನು ಕೇಳಿದ್ದರು. ಬಿರುಕುಗಳಿಗೆ ಕಾರಣವೇನು ಎಂಬುದನ್ನು ತಜ್ಞರು ಕಂಡುಹಿಡಿಯಬೇಕೆಂದು ಅವರು ಬಯಸಿದ್ದರು. ಪೂಜೆಯ ಸಮಯದಲ್ಲಿ ಬಳಸುವ ವಸ್ತುಗಳಿಂದಾಗಿ ಬಿರುಕುಗಳು ಉಂಟಾಗಿವೆ ಎಂದು ತಿಳಿದು ಬಂದಿದೆ.
ಇಲ್ಲಿಯ ಪ್ರಾಚೀನ ಬಾಬುಲನಾಥ ಶಿವಲಿಂಗದಲ್ಲಿ ಬಿರುಕು ಮೂಡಿದೆ. ಐ.ಐ.ಟಿ. ಮುಂಬೈ ವರದಿಯಿಂದ ಈ ವಿಷಯ ಬಹಿರಂಗವಾಗಿದೆ. ಶಿವಲಿಂಗದ ಮೇಲೆ ಹಾಲು, ನೀರು ಮತ್ತು ಇತರ ವಸ್ತುಗಳನ್ನು ಅಭಿಷೇಕ್ ಮಾಡಲಾಗುತ್ತದೆ. ಕಲಬೆರಕೆ ಬಣ್ಣ, ಭಸ್ಮ, ಕುಂಕುಮ, ಚಂದನ, ಹಾಲು ಅರ್ಪಿಸಿರುವುದರಿಂದ ಶಿವಲಿಂಗಕ್ಕೆ ಬಿರುಕು ಮೂಡಿರುವುದು ಪ್ರಾಥಮಿಕ ಮಾಹಿತಿ ಕಂಡು ಬಂದಿದೆ. ಇದರಿಂದ ಅಲ್ಲಿ ಭಕ್ತರಿಗೆ ಅಭಿಷೇಕ ಮಾಡುವುದನ್ನು ಆಡಳಿತವರ್ಗವು ನಿರ್ಬಂಧಿಸಿದೆ.