ಇಡುಕ್ಕಿ: ಒಂಟಿಸಲಗದ ಬಂಧನಕ್ಕೆ ಆಗ್ರಹಿಸಿ ಇಡುಕ್ಕಿಯಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದೆ.
ಆನೆ ದಾಳಿ ಸಾಮಾನ್ಯವಾಗಿರುವ ಸಿಂಗುಕಂಡ್ ನಲ್ಲಿ ಇಂದಿನಿಂದ ಅಹೋರಾತ್ರಿ ಧರಣಿ ನಡೆಸಲು ಸ್ಥಳೀಯರು ನಿರ್ಧರಿಸಿದ್ದಾರೆ. ಒಂಟಿಸಲಗ ಬಂಧಿಸುವ ನಿರ್ಧಾರ ಆಗುವವರೆಗೂ ಧರಣಿ ಮುಂದುವರಿಸಲು ನಿರ್ಧರಿಸಲಾಗಿದೆ.
ಪೂಪ್ಪಾರ ಕೇಂದ್ರದಲ್ಲೂ ಮುಷ್ಕರ ಪ್ರಬಲವಾಗಲಿದೆ. ಇಂದು ಮಧ್ಯಾಹ್ನ ಮೂರು ಗಂಟೆಗೆ ಜನಪ್ರತಿನಿಧಿಗಳು ಭಾಗವಹಿಸಿ ಧರಣಿ ನಡೆಯಿತು. ಮುಂದಿನ ದಿನಗಳಲ್ಲಿ ಒಂಟಿಸಲಗನ ದಾಳಿಗೆ ಬಲಿಯಾದವರ ಕುಟುಂಬವನ್ನು ಒಳಗೊಂಡಂತೆ ಮುಷ್ಕರವನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ನ್ಯಾಯಾಲಯ ನೇಮಿಸಿದ ತಜ್ಞರ ಸಮಿತಿ ನೇರವಾಗಿ ಪ್ರದೇಶಕ್ಕೆ ಭೇಟಿ ನೀಡಿದೆ. ಈ ವೇಳೆ ವಿಷಯಗಳ ಮೌಲ್ಯಮಾಪನದ ಅಗತ್ಯವನ್ನು ಸ್ಥಳೀಯರು ಮುಂದಿಟ್ಟರು.
ನಿನ್ನೆ ನ್ಯಾಯಾಲಯದ ಆದೇಶ ವಿರೋಧಿಸಿ ಹರತಾಳ ಯಶಸ್ವಿಯಾಗಿ ನಡೆದಿತ್ತು. ಇಡುಕ್ಕಿಯ ಹತ್ತು ಪಂಚಾಯಿತಿಗಳಲ್ಲಿ ಹರತಾಳ ನಡೆಸಲಾಗಿತ್ತು. ಪ್ರತಿಭಟನಾಕಾರರು ಕೊಚ್ಚಿ-ಧನುಷ್ಕೋಟಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.
ಇದೇ ವೇಳೆ ನಿನ್ನೆ ಮತ್ತೆ ಜನವಸತಿ ಪ್ರದೇಶದ ಬಳಿ ಒಂಟಿಸಲಗ ದಾಳಿ ನಡೆಸಿತ್ತು. . ಸುಮಾರು ಎರಡೂವರೆ ಗಂಟೆಗಳ ಕಾಲ ಸಿಮೆಂಟ್ ಸೇತುವೆ ಬಳಿ ಕಾಡಾನೆ ಉಪಟಳ ನಡೆಸಿತ್ತೆಂದು ತಿಳಿದುಬಂದಿದೆ.
ಇಡುಕ್ಕಿಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದ ಸ್ಥಳೀಯರು: ಒಂಟಿಸಲಗ ಸೆರೆಹಿಡಿಯುವವರೆಗೂ ಧರಣಿ ಮುಂದುವರಿಕೆ
0
ಮಾರ್ಚ್ 31, 2023