HEALTH TIPS

ವಿವಾಹಕ್ಕೆ ಆಮಂತ್ರಿಸಲಿಲ್ಲ ಎಂದು ಮದುವೆ ಮನೆಗೆ ಕಲ್ಲೆಸೆದ ಯುವಕನ ಕೊಲೆ

 

                  ಕೊಟ್ಟಾಯಂ: ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳವು ವಿಕೋಪಕ್ಕೆ ತಿರುಗಿದ ಪರಿಣಾಮ 36 ವರ್ಷದ ಯುವಕನೊಬ್ಬನ ಹತ್ಯೆಯಾಗಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಕರುಕಚಾಲ್ ಗ್ರಾಮದಲ್ಲಿ ನಡೆದಿದೆ ಎಂದು timesnownews.com ವರದಿ ಮಾಡಿದೆ.ಸಂತ್ರಸ್ತನನ್ನು ಬಿನು ಎಂದು ಗುರುತಿಸಲಾಗಿದೆ.

                   ತನ್ನ ನೆರೆಮನೆಯವರು ವಿವಾಹ ಸಮಾರಂಭಕ್ಕೆ ತನ್ನನ್ನು ಆಮಂತ್ರಿಸಲಿಲ್ಲ ಎಂಬ ಕಾರಣಕ್ಕೆ ಕುಪಿತಗೊಂಡ ಬಿನು, ಅವರ ಮನೆಯ ಮೇಲೆ ನಿರಂತರವಾಗಿ ಕಲ್ಲು ತೂರಾಟ ನಡೆಸಿದ್ದಾನೆ. ಅದಕ್ಕೆ ಪ್ರತೀಕಾರವಾಗಿ ನೆರೆಮನೆಯವರು ಬಿನು ಜೊತೆಗೆ ವೈಷಮ್ಯವಿದ್ದ ಯುವಕನ ನೆರವು ಪಡೆದು ಆತನನ್ನು ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ.

                      ಈ ವಾರದ ಆರಂಭದಲ್ಲಿ ಕರುಕಚಾಲ್ ಗ್ರಾಮದ ನಿವಾಸಿ ಸೆಬಾಸ್ಟಿಯನ್ ವಿವಾಹವಾಗಿದ್ದರು. ಆದರೆ, ಉಂಬಿಡಿಯ ಬಿನು ಎಂಬಾತನನ್ನು ವಿವಾಹಕ್ಕೆ ಆಮಂತ್ರಿಸಿರಲಿಲ್ಲ. ಇದರಿಂದ ಅವಮಾನಿತನಾದ ಬಿನು ವರನ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಎಂದು 'ಮಲಯಾಳಂ ಮನೋರಮಾ' ದಿನಪತ್ರಿಕೆ ವರದಿ ಮಾಡಿದೆ.

                     ಇದರ ವಿರುದ್ಧ ಪ್ರತೀಕಾರಕ್ಕೆ ಮುಂದಾದ ವರ ಸೆಬಾಸ್ಟಿಯನ್, ಬಿನುವಿನೊಂದಿಗೆ ವೈಷಮ್ಯವಿದ್ದ ವಿಷ್ಣು ಎಂಬಾತನೊಂದಿಗೆ ಸಂಪರ್ಕ ಬೆಳೆಸಿದ್ದಾನೆ. ಇದಕ್ಕೂ ಮುನ್ನ ವಿಷ್ಣುವನ್ನು ಆತನ ಪತ್ನಿಯ ಎದುರಿಗೇ ಬಿನು ನಿಂದಿಸಿದ್ದ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

              ರವಿವಾರ ರಾತ್ರಿ ವಿಷ್ಣು ಹಾಗೂ ಸೆಬಾಸ್ಟಿಯನ್ ಬಿನುವಿನೊಂದಿಗೆ ಜಗಳಕ್ಕಿಳಿದು, ಆತನ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಇರಿತದ ಗಾಯಗಳಿಗೆ ಆತ ಬಲಿಯಾಗಿದ್ದಾನೆ. ಇದಾದ ನಂತರ ಆರೋಪಿದ್ವಯರು ತಾವು ಹತ್ಯೆಗೆ ಬಳಸಿದ ಆಯುಧಗಳೊಂದಿಗೆ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries