ಕಾಸರಗೋಡು: ರೈಲ್ವೆ ಪಾಲಕ್ಕಾಡ್ ವಿಭಾಗದ ವಿಭಾಗೀಯ ಪ್ರಬಂಧಕ ಯಶ್‍ಪಾಲ್ ಸಿಂಗ್ ತೋಮರ್ ನೇತೃತ್ವದ ಉನ್ನತ ಅಧಿಕಾರಿಗಳ ತಂಡ ಕಾಸರಗೋಡು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಅವಲೋಕನ ನಡೆಸಿತು.
ರೈಲ್ವೆ ಪ್ರಯಾಣಿಕರಿಗೆ ಅಗತ್ಯದ ಸವಲತ್ತು ಖಾತ್ರಿಪಡಿಸುವ ಅಮೃತ್ ಭಾರತ್ ಯೋಜನೆಯಲ್ಲಿ ಕಾಸರಗೋಡು ರೈಲ್ವೆ ನಿಲ್ದಾಣವನ್ನು ಒಳಪಡಿಸಲಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳ ಅವಲೋಕನಾ ಸಂದರ್ಶನ ಆಯೋಜಿಸಲಾಗಿತ್ತು. ಪ್ರಯಾಣಿಕರು ರೈಲ್ವೆ ಫ್ಲ್ಯಾಟ್‍ಫಾರ್ಮ್‍ಗೆ ಸಗಲು ಎಸ್ಕಲೇಟರ್, ಅಗತ್ಯದ ಬೆಳಕಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ಅಮೃತ್ ಭಾರತ್ ಯೋಜನೆಯಲ್ಲಿ ಕಲ್ಪಿಸಲಕಾಗುತ್ತಿದೆ. ರೈಲ್ವೆ ವಿಭಾಗದ ಪಾಲಕ್ಕಾಡ್ ವಿಭಾಗದಲ್ಲಿ ಒಟ್ಟು 15 ನಿಲ್ದಾಣಗಳನ್ನು ಯೋಜನೆಯಲ್ಲಿ ಒಳಪಡಿಸಲಾಗಿದೆ. ಜಿಲ್ಲೆಯಲ್ಲಿ ಕಾಸರಗೋಡು ರೈಲ್ವೆ ನಿಲ್ದಾಣ ಮಾತ್ರ ಇದರಲ್ಲಿ ಒಳಗೊಂಡಿದೆ. ರೈಲ್ವೆ ನಿಲ್ದಾಣದಲ್ಲಿ ಜಾರಿಯಲ್ಲಿರುವ ಸೌಕರ್ಯಗಳ ಬಗ್ಗೆ ಅಧಿಕಾರಿಗಳ ತಂಡ ಅವಲೋಕನ ನಡೆಸಿತು. ಹೆಚ್ಚುವರಿ ವಲಯ ರೈಲ್ವೆ ಪ್ರಬಂಧಕ ಎಸ್. ಜಯಕೃಷ್ಣನ್, ವಿವಿಧ ವಿಭಾಗಗಳಿಗೆ ಒಳಪಟ್ಟ ಹಿರಿಯ ಅಧಿಕಾರಿಗಳಾದ ಪೆರುಮಾಳ್ ನಂದಲಾಲ್, ಎಂ. ವಆಸುದೇವನ್, ಕೆ. ಅರುಣ್ ಕುಮಾರ್, ಪಿ.ಜಿ ಮಾಧವನ್ ಕುಟ್ಟಿ, ವಇ.ಅನೂಪ್, ಎಲ್ದೋ ಸಿ. ಥಾಮಸ್, ಬಿ.ದೇವ ಮುಂತಾದವರು ಉಪಸ್ಥಿತರಿದ್ದರು.