ಕಾಸರಗೋಡು :ಜಿಲ್ಲಾಡಳಿತದ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಒಂದು ಲಕ್ಷ ಜನರಿಗೆ ಆರ್ಥಿಕ
ಸಾಕ್ಷರತೆಯ ಅರಿವು ಮೂಡಿಸುವ ಅಭಿಯಾನ ಆರಂಭವಾಗಿದೆ. ಉದಯಗಿರಿಯಲ್ಲಿ ಕಂದಾಯ ಇಲಾಖೆ
ಸಚಿವ ಕೆ.ರಾಜನ್ ಆರ್ಥಿಕ ಸಾಕ್ಷರತಾ ಯೋಜನೆಯ ಪೋಸ್ಟರ್ ಬಿಡುಗಡೆ ಮಾಡಿದರು.
ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಪೋಸ್ಟರ್ ಸ್ವೀಕರಿಸಿದರು. ಶಾಸಕ
ಎನ್.ಎ.ನೆಲ್ಲಿಕುನ್,ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾ
ಕೌಶಲ್ಯ ಸಂಯೋಜಕ ಎಂ.ಜಿ.ನಿದಿನ್, ಮಹಾತ್ಮಗಾಂಧಿ ರಾಷ್ಟ್ರೀಯ ಸಹವರ್ತಿ ಪಿ.ಸಿ.ಅಬ್ದುಲ್
ಸಮದ್, ಅಪಾಯ ವಿಶ್ಲೇಷಕ ಪ್ರೇಂಜಿ ಪ್ರಕಾಶ್ ಉಪಸ್ಥಿತರಿದ್ದರು.
ಆರ್ಥಿಕ ಅನಕ್ಷರತೆಯಿಂದಾಗಿ ಸಾಲದ ಸುಳಿಯಲ್ಲಿ ಸಿಲುಕಿ ನಂತರ ಸಾಲ
ವಸೂಲಿಯಂತಹ ಕ್ರಮಗಳಿಗೆ ಒಳಗಾಗಬೇಕಾದ ಪರಿಸ್ಥಿತಿಯಲ್ಲಿ ರುವ ಸಾರ್ವಜನಿಕರಿಗೆ ಅರ್ಥಿಕ
ಶಿಕ್ಷಣ ನೀದುವ ನಿಟ್ಟಿನಲ್ಲಿ ಆರ್ಥಿಕ ಸಾಕ್ಷರತಾ ಅಭಿಯಾನವನ್ನು ನಡೆಸಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೊಳಿಸಿರುವ ವಿವಿಧ ಆರ್ಥಿಕ ಸಹಾಯ ಯೋಜನೆಗಳು,
ಸಂಪತ್ತಿನ ವಿನಿಯೋಗ, ಹಾಗೂ ಸಾಲಗಳ ಕುರಿತಾದ ಮಾಹಿತಿಗಳನ್ನು ಲೀಡ್ ಬ್ಯಾಂಕ್
ನೇತೃತ್ವದಲ್ಲಿ ನೀಡಲಾಗುವುದು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಚಾರ
ನಡೆಸಲಾಗುವುದು. ಐ ಆ್ಯಂಡ್ ಪಿಆರ್ ಡಿ, ಕುಟುಂಬಶ್ರೀ, ಸ್ಥಳೀಯ ಆಡಳಿತ ಇಲಾಖೆ ಹಾಗೂ
ಬ್ಯಾಂಕ್ ಎಂಬಿವುಗಗಳ ಮೂಲಕ ಜಿಲ್ಲೆಯಲ್ಲಿ ಒಂದು ಲಕ್ಷ ಜನರಿಗೆ ಸಾಕ್ಷರತೆಯನ್ನು ನೀಡುವ
ಗುರಿ ಹೊಂದಲಾಗಿದೆ.