ಇಂದೋರ್: ಆಂಗ್ಲ ದಿನ ಪತ್ರಿಕೆಯ ಹಿರಿಯ ಕ್ರೀಡಾ ಪತ್ರಕರ್ತ ಇಂದೋರ್‌ನ ಹೋಟೆಲ್‌ನಲ್ಲಿ ನಿಧನರಾಗಿದ್ದು ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ.
ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ದಿ ಹಿಂದೂ ಪತ್ರಿಕೆಯ ಹಿರಿಯ ಉಪ ಸಂಪಾದಕ 57 ವರ್ಷದ ಎಸ್.ಕೆ ದಿನಕರ್ ಸೋಮವಾರ ವಿಜಯ್ ನಗರ ಪ್ರದೇಶದ ಹೋಟೆಲ್ ನಲ್ಲಿ ಅಸ್ವಸ್ಥರಾಗಿದ್ದರು. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ವೈದ್ಯರು ಅವರು ಸಾವನ್ನಪ್ಪಿರುವುದಾಗಿ ತಿಳಿಸಿದರು.
ಪೊಲೀಸರು ದಿನಕರ್ ಅವರ ದೇಹದ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಅವರ ಸಾವಿನ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಏತನ್ಮಧ್ಯೆ, ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯ ಇಂದೋರ್ ನಲ್ಲಿ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯವನ್ನು ದಿನಕರ್ ವರದಿ ಮಾಡಿದ್ದಾರೆ ಎಂದು ದಿನಕರ್ ಸಹೋದ್ಯೋಗಿಯೊಬ್ಬರು ಹೇಳಿದರು
ಮಾರ್ಚ್ 9ರಿಂದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಅವರು ಇಂದೋರ್ ಗೆ ತೆರಳಿದ್ದರು.