ಮುಳ್ಳೇರಿಯ: ದೇಲಂಪಾಡಿ ಪಂಚಾಯತಿ ಹಾಗೂ ಅಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಷಯರೋಗ ನಿರ್ಮೂಲನ ದಿನಾಚರಣೆ ಕಾರ್ಯಕ್ರಮಗಳು ನಡೆದವು. ಕ್ಷಯರೋಗ ನಿರ್ಮೂಲನ ಪ್ರತಿಜ್ಞೆ, ಕ್ಷಯರೋಗ ಥೀಮ್ ಇರುವ ಧ್ವಜ ಆರೋಹಣ, ಕ್ಷಯರೋಗಿಗಳಿಗೆ ಪೌಷ್ಠಿಕಾಂಶದ ಕಿಟ್ ವಿತರಣೆ ಹಾಗೂ ಜಾಗೃತಿ ತರಗತಿಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ದೇಲಂಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ನ್ಯಾಯವಾದಿ ಎ.ಪಿ.ಉಷಾ ಉದ್ಘಾಟಿಸಿದರು. ಮೆಡಿಕಲ್ ಆಫೀಸರ್ ಡಾ.ಎನ್.ಸರಳಾ ಅಧ್ಯಕ್ಷತೆ ವಹಿಸಿದ್ದರು. ಹೆಲ್ತ್ ಇನ್ಸ್ಪೆಕ್ಟರ್ ಕೆ.ಸುರೇಶ್ ಕುಮಾರ್ ಜಾಗೃತಿ ತರಗತಿ ನಡೆಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ನಳಿನಾಕ್ಷಿ, ವಾರ್ಡ್ ಸದಸ್ಯೆ ನಿಶಾ ಮಾತನಾಡಿದರು. ಜೆ.ಎಚ್.ಐ ಅಬ್ದುಲ್ ರಹಮಾನ್ ಸ್ವಾಗತಿಸಿ, ಅನುಪ್ರಿಯಾ ವಂದಿಸಿದರು.
ದೇಲಂಪಾಡಿಯಲ್ಲಿ ಕ್ಷಯರೋಗ ನಿರ್ಮೂಲನ ದಿನಾಚರಣೆ
0
ಮಾರ್ಚ್ 24, 2023