ಭೋಪಾಲ್: ವಿಭಜನೆಯಾದ ಏಳು ದಶಕಗಳ ಬಳಿಕ ಪಾಕಿಸ್ತಾನದ ಜನರಿಗೆ ಭಾರತದಿಂದ ದೇಶ ವಿಭಜನೆಯಾಗಬಾರದಿತ್ತು ಎಂಬ ಅರಿವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಮುಖ್ಯಸ್ಥ ,ಮೋಹನ್ ಭಾಗವತ್ ಅಭಿಪ್ರಾಪಟ್ಟಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಹೇಮು ಕಲಾನಿ ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡುವ ವೇಳೆ 1947ರಲ್ಲಿ ವಿಭಜನೆಗೂ ಮೊದಲು ಭಅರತವಾಗಿತ್ತು.
ವಿಭಜನೆಯ ನಂತರ ಅಲ್ಲಿನ ಜನರು ನೋವಿನಲ್ಲಿ ಜೀವನ ಕಳೆಯುವಂತಾಗಿದೆ.
ಎರಡು ದೇಶಗಳ ನಡುವಿನ ಸಂಬಂಧವನ್ನು ಉಲ್ಲೇಖಿಸಿದ ಭಾಗವತ್ ಭಾರತವು ಬೇರೆ ದೇಶಗಳ ಮೇಲೆ ದಾಳಿ ನಡೆಸುವಂತೆ ಕರೆ ಕೊಟ್ಟಿಲ್ಲ. ಹಾಗೆಂದ ಮಾತ್ರಕ್ಕೆ ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕೆಂದು ನಾನು ಹೇಳುತ್ತಿಲ್ಲ ಭಾರತ ಆ ಸಂಸ್ಕೃತಿಗೆ ಸೇರಿದ ದೇಶ ಅಲ್ಲ ಎಂದು ಹೇಳಿದ್ಧಾರೆ.
ನಾವು ನಮ್ಮ ಆತ್ಮ ರಕ್ಷಣೆಗಾಗಿ ತಕ್ಕ ತಿರುಗೇಟು ನೀಡುತ್ತಾ ಬಂದವರು ಎಂದು ಭಾರತ ಪಾಕಿಸ್ತಾನದ ವಿರುದ್ದ ನಡೆಸಿದ ಸರ್ಜಿಕಲ್ ಸ್ಟ್ರೈಕ್ಗಳ ಬಗ್ಗೆ ಮಾತನಾಡಿದ್ದಾರೆ.
ಪಾಕಿಸ್ತಾನದ ಜನರು ಈಗ ಭಾರತದಿಂದ ವಿಭಜನೆಯಾಗಿ ದೊಡ್ಡ ತಪ್ಪನ್ನು ಮಾಡಿದ್ದೇವು ಎಂದು ಹೇಳುತ್ತಿದ್ದಾರೆ. ವಿಭಜನೆಯ ಸಮಯದಲ್ಲಿ ಸಿಂಧಿ ಸಮುದಾಯದವರು ಸಿಂಧು ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಕಾಪಾಡಲು ಆ ಭಾರತದಿಂದ ಈ ಭಾರತಕ್ಕೆ ಬಂದರು ಎಂದು ಹೇಮು ಕಲಾನಿ ಜನ್ಮ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವ ವೇಳೆ ಹೇಳಿದ್ದಾರೆ.