ನೋಯ್ಡಾ: ಅದಾನಿ ಸಮೂಹದ ನಿರ್ಮಾಣ ಹಂತದಲ್ಲಿರುವ ದತ್ತಾಂಶ ಕೇಂದ್ರ (ಡೇಟಾ ಸೆಂಟರ್)ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 11.20ರ ಸುಮಾರಿಗೆ ಸೆಕ್ಟರ್ 62 ಪ್ರದೇಶದ ಕೈಗಾರಿಕಾ ಕೇಂದ್ರದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಬೆಂಕಿಯನ್ನು ನಂದಿಸಲಾಗಿದೆ.
ಈ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ಪ್ರದೀಪ್ ಕುಮಾರ್ ಚೌಬೆ ಹೇಳಿದ್ದಾರೆ.
ಸೆಕ್ಟರ್ 62ರ ಪ್ರದೇಶದಲ್ಲಿ ಅದಾನಿ ಕಾನೆಕ್ಸ್ ಡಾಟಾ ಸೆಂಟರ್‌ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಕೆಲವು ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಹಾಳೆಗಳು ಬೆಂಕಿಗೆ ಆಹುತಿಯಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಚೌಬೆ ತಿಳಿಸಿದ್ದಾರೆ.
ನೋಯ್ಡಾದಲ್ಲಿ ಅದಾನಿ ಸಮೂಹ ಮುಂಬರುವ ಡೇಟಾ ಸೆಂಟರ್ 100 MW IT ಲೋಡ್ ಸಾಮರ್ಥ್ಯವನ್ನು ಹೊಂದಿದೆ. ಈ ವರ್ಷದ ಅಂತ್ಯದ ವೇಳೆಗೆ ಈ ಡೇಟಾ ಸೆಂಟರ್ ಪ್ರಾರಂಭವಾಗಲಿದೆ ಎಂದು ಅದಾನಿ ಕನೆಕ್ಸ್ ವೆಬ್‌ಸೈಟ್ ತಿಳಿಸಿದೆ.