HEALTH TIPS

ಕಾನೂನು ವೃತ್ತಿಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶ: ಸಿಜೆಐ ಪ್ರತಿಪಾದನೆ

                ಧುರೈ: ಕಾನೂನು ವೃತ್ತಿಪರರಲ್ಲಿ ಪುರುಷ-ಮಹಿಳೆ ಅನುಪಾತದಲ್ಲಿ ದೊಡ್ಡ ಅಂತರವಿದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, 'ನಮ್ಮಲ್ಲಿ ಪ್ರತಿಭಾನ್ವಿತ ಯುವ ವಕೀಲೆಯರಿಗೆ ಕೊರತೆಯಿಲ್ಲ. ಮಹಿಳೆಯರಿಗೂ ಸಮಾನ ಅವಕಾಶ ಸಿಗಬೇಕಿದೆ' ಎಂದರು.

                   ಮಹಿಳೆಯರ ನೇಮಕಾತಿ ಕುರಿತು ನೇಮಕಾತಿ ವಿಭಾಗದ ನಿಲುವು 'ಸಂದೇಹಾಸ್ಪದ'ವಿದ್ದಂತಿದೆ. ಮಹಿಳೆಗೆ ಅವರ ಕುಟುಂಬದ ಜವಾಬ್ದಾರಿಗಳು ವೃತ್ತಿಗೆ ತೊಡಕಾಗಬಹುದು ಎಂದು ಭಾವಿಸಿದಂತಿದೆ ಎಂದರು.

                 ಅಂಕಿ ಅಂಶಗಳ ಪ್ರಕಾರ, ತಮಿಳುನಾಡಿನಲ್ಲಿ ವಕೀಲಿಕೆಗೆ 50 ಸಾವಿರ ಪುರುಷರು ನೋಂದಣಿ ಮಾಡಿಕೊಂಡಿದ್ದರೆ, ಮಹಿಳೆಯರ ಸಂಖ್ಯೆ 5 ಸಾವಿರ ಮಾತ್ರ. ಪುರುಷ-ಮಹಿಳೆಯರ ನಡುವೆ ದೊಡ್ಡ ಅಂತರವಿದೆ ಎಂದು ಹೇಳಿದರು.

                    ಕಾನೂನು ವೃತ್ತಿಯು ಮಹಿಳೆಯರಿಗ ಸಮಾನ ಅವಕಾಶ ನೀಡುತ್ತಿಲ್ಲ. ದೇಶದ ಅಂಕಿ ಅಂಶದ ಸ್ಥಿತಿಯೂ ಹೀಗೇ ಇದೆ. ಆದರೆ, ಚಿತ್ರಣ ಬದಲಾಗುತ್ತಿದೆ. ಜಿಲ್ಲಾ ನ್ಯಾಯಾಲಯಗಳಿಗೆ ಈಚೆಗೆ ನಡೆದ ನೇಮಕಾತಿಯಲ್ಲಿ ಶೇ 50ಕ್ಕೂ ಹೆಚ್ಚು ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಆದರೆ, ಒಟ್ಟಾಗಿ ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries