ಮಧೂರು: ಮಧೂರು ಗ್ರಾಮದಲ್ಲಿ ಕೇರಳ ರಾಜ್ಯ ಹೌಸಿಂಗ್ ಬೋರ್ಡ್ ನಿರ್ಮಿಸಿರುವ ಮಹಿಳಾ ನೌಕರರ ವಸತಿ ನಿಲಯವನ್ನು ರಾಜ್ಯ ಕಂದಾಯ-ವಸತಿ ಖಾತೆ ಸಚಿವ ಕೆ.ರಾಜನ್ ಗುರುವಾರ ಉದ್ಘಾಟಿಸಿದರು. ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 75 ಕೋಟಿ ರೂ.ಗಳ ಯೋಜನೆಯನ್ನು ಪೂರ್ಣಗೊಳಿಸುತ್ತಿದೆ ಎಂದು ಕೆ.ರಾಜನ್ ಮಾಹಿತಿ ನೀಡಿದರು. ಮಹಿಳಾ ನೌಕರಿಗಾಗಿ ವಸತಿ ನಿಲಯವನ್ನು ಮಾತ್ರವಲ್ಲದೆ ಸÀರ್ಕಾರಿ ನೌಕರರಿಗೆ ಬೇಕಾಗಿ ಹೊಸ ಕಟ್ಟಡ ನಿರ್ಮಿಸಲು ಸಿದ್ಧರಿದ್ದೇವೆ ಎಂದ ಸಚಿವರು, ಲಕ್ಷಂವೀಡು ಯೋಜನೆಯಂತಹ ಪದ್ದತಿಗಳನ್ನು ಮಾಡಿ ಕೇರಳದ ಇತಿಹಾಸದಲ್ಲಿಯೇ ಅತ್ಯುತ್ತಮ ಕೆಲಸ ಮಾಡಿದ ಅನುಭವ ಇರುವ ಇಲಾಖೆಯಾಗಿದೆ ವಸತಿ ಇಲಾಖೆ. ರಾಜ್ಯ ಸÀರ್ಕಾರದ ಎರಡನೇ ವμರ್Áಚರಣೆಗೆ ಸಂಬಂಧಿಸಿ ನಡೆಯುವ 100 ದಿನಗಳ ಕಾರ್ಯಕ್ರಮದಲ್ಲಿ ವಸತಿ ಇಲಾಖೆ ಹತ್ತು ಯೋಜನೆಗಳನ್ನು ಪರಿಚಯಿಸಲಿದೆ ಎಂದು ಸಚಿವರು ಹೇಳಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಸತಿ ಆಯುಕ್ತ ಹಾಗೂ ರಾಜ್ಯ ಗೃಹ ಮಂಡಳಿ ಕಾರ್ಯದರ್ಶಿ ವಿನಯ್ ಗೋಯಲ್ ವರದಿ ಮಂಡಿಸಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾ, ಕಾಸರಗೋಡು ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಸಿ.ಎ.ಸೈಮಾ, ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಗೋಪಾಲಕೃಷ್ಣ, ರಾಜ್ಯ ಗೃಹ ಮಂಡಳಿ ಸದಸ್ಯ ಕರೈ ರಾಜನ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಿ.ಎಸ್.ಶಿಮ್ನಾ., ಮಧೂರು ಗ್ರಾಮ ಪಂಚಾಯತಿ ಸದಸ್ಯ ಹಬೀಬ್ ಚೆಟ್ಟುಂಗುಳಿ, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಬಿಜು ಉಣ್ಣಿತ್ತಾನ್, ಟಿ.ಪಿ.ಯೂಸುಫ್, ಕೂಕ್ಕಲ್ ಬಾಲಕೃಷ್ಣನ್ ಮತ್ತಿತರರು ಮಾತನಾಡಿದರು. ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಪಿ.ಪಿ.ಸುನೀರ್ ಸ್ವಾಗತಸಿ, ರಾಜ್ಯ ಗೃಹ ಮಂಡಳಿಯ ಮುಖ್ಯ ಎಂಜಿನಿಯರ್ ಹರಿಕೃಷ್ಣನ್ ವಂದಿಸಿದರು.
ಉದ್ಯೋಗಸ್ಥ ಮಹಿಳಾ ಹಾಸ್ಟೆಲ್‍ಗೆ 504 ಲಕ್ಷ ರೂ.ಗಳ ಆಡಳಿತಾತ್ಮಕ ಅನುದಾನ ದೊರೆತಿದ್ದು, ಅದರಲ್ಲಿ 60 ಶೇಕಡ ಷ್ಟು ಕೇಂದ್ರ ಹಾಗೂ 40 ಶೇಕಡ ರಾಜ್ಯದ ಹಂಚಿಕೆಯಾಗಿದೆ. ಮಧೂರು ಗ್ರಾಮದ ಉದಯಗಿರಿಯಲ್ಲಿ 34.03 ಸೆಂಟ್ಸ್ ಹೌಸಿಂಗ್ ಬೋರ್ಡ್ ಜಾಗದಲ್ಲಿ ಹಾಸ್ಟೆಲ್ ನಿರ್ಮಿಸಲಾಗಿದೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಒಟ್ಟು 109 ಹಾಸಿಗೆಗಳಿವೆ. ಸ್ನಾನಗೃಹ ಜೊತೆಗೆ ಇರುವ, ಮೂರು ಹಾಸಿಗೆಗಳಿರುವ ಎರಡು ಕೋಣೆಗಳು, ಎರಡು ಹಾಸಿಗೆಗಳಿರುವ ಐದು ಕೋಣೆಗಳು, ಆರು ಹಾಸಿಗೆಗಳಿರುವ ಎರಡು ಡಾರ್ಮಿಟರಿಗಳನ್ನು ಒಳಗೊಂಡಿದೆ. ಶೌಚಾಲಯಗಳ ಜೊತೆಗೆ ಇಲ್ಲದೆ ಮೂರು ಹಾಸಿಗೆಗಳಿರುವ 21 ಕೊಠಡಿಗಳು, ಎರಡು ಹಾಸಿಗೆಗಳಿರುವ ಎರಡು ಕೊಠಡಿಗಳು, ಏಳು ಹಾಸಿಗೆಗಳ ಎರಡು ವಸತಿ ನಿಲಯಗಳು ಇವೆ. ಅಂಗವಿಕಲರ ಕೊಠಡಿಗಳು, ಡೇ ಕೇರ್, ಅಡುಗೆ ಮನೆ, ಊಟ, ಹಾಲ್, ಟೆರೇಸ್ ಬಟ್ಟೆ ಒಣಗಿಸುವ ಪ್ರದೇಶ ಮತ್ತು ಆಟದ ಮೈದಾನದಲ್ಲಿ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ.