ತಿರುವನಂತಪುರಂ: ‘ವಾಳಕುಲ ಬೈ ವೈಲೋಪಿಲ್ಲಿ’ ಎಂಬ ಪ್ರಬಂಧಕ್ಕೆ ಚಿಂತಾ ಜೆರೋಮ್ ಅವರಿಗೆ ಡಾಕ್ಟರೇಟ್ ನೀಡಿದ ಕೇರಳ ವಿಶ್ವವಿದ್ಯಾಲಯದ ಮಾಜಿ ಪೆÇ್ರ ವೈಸ್ ಚಾನ್ಸಲರ್ ಮತ್ತು ಇಂಗ್ಲಿμï ಪ್ರಾಧ್ಯಾಪಕ ಡಾ.ಪಿ.ಪಿ.ಅಜಯಕುಮಾರಿ ಅವರ ಹೆಸರನ್ನು ಮಲಯಾಳಂ ವಿವಿಯ ವಿಸಿ ಆಗಿ ಪಿಣರಾಯಿ ಸರ್ಕಾರ ನಾಮನಿರ್ದೇಶನ ಮಾಡಿದೆ.
ಆದರೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಈ ಪಟ್ಟಿಯಿಂದ ಡಾ.ಪಿ.ಪಿ.ಅಜಯಕುಮಾರ್ ಹೆಸರನ್ನು ಕಡಿತಗೊಳಿಸಿದ್ದಾರೆ.
ಇವರಲ್ಲದೆ ಸರಕಾರ ಮಲಯಾಳಂ ವಿವಿಯ ಉಪಕುಲಪತಿ ಹುದ್ದೆಗೆ ಪ್ರಸ್ತಾವನೆ ಸಲ್ಲಿಸಿದ್ದ ಸಂಸ್ಕøತ ವಿವಿಯ ಮಲಯಾಳಂ ಪ್ರಾಧ್ಯಾಪಕ ಡಾ. ವತ್ಸಲನ್ ವತುಸೇರಿ, ಕೇರಳ ವಿಶ್ವವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕ ಡಾ. ಶೈಲಾ ಅವರ ಹೆಸರನ್ನೂ ರಾಜ್ಯಪಾಲರು ಕೈಬಿಟ್ಟಿದ್ದಾರೆ.
ಬದಲಾಗಿ ಎಂಜಿ ವಿವಿಯ ಉಪಕುಲಪತಿ ಸಾಬು ಥಾಮಸ್ ಅವರಿಗೆ ವಿಸಿ ಪ್ರಭಾರ ನೀಡುವಂತೆ ರಾಜ್ಯಪಾಲರು ಆದೇಶಿಸಿರುವÀರು. ರಾಜ್ಯ ಸರ್ಕಾರ ನೀಡಿದ ಪಟ್ಟಿಯಲ್ಲಿರುವ ಮೂವರನ್ನು ತಿರಸ್ಕರಿಸಿ ಹೊಸ ವ್ಯಕ್ತಿಯನ್ನು ವಿಸಿಯನ್ನಾಗಿ ಮಾಡಿದ ರಾಜ್ಯಪಾಲರ ಕ್ರಮವನ್ನು ಟೀಕಿಸಲಾಗಿದೆ. ಆದರೆ ರಾಜ್ಯಪಾಲರ ಆದೇಶವು ಮಲಯಾಳಂ ವಿವಿ ಕಾಯ್ದೆಯ ಸೆಕ್ಷನ್ 29ರ ಒಂಬತ್ತನೇ ಉಪವಿಭಾಗದ ಪ್ರಕಾರ ಕ್ರಮವಾಗಿದೆ ಎಂದು ಹೇಳುತ್ತದೆ.
ವಾಳಕುಲ ಬೈ ವೈಲೋಪಿಲ್ಲಿ ನೀಡಿದವರಿಗೆ ವಿಸಿಯಾಗಲು ಅರ್ಹತೆ ಇಲ್ಲ!: ರಾಜ್ಯಪಾಲ
0
ಮಾರ್ಚ್ 06, 2023
Tags