ಕಾಸರಗೋಡು: ವಿಜಿಲೆನ್ಸ್ ಅಧಿಕಾರಿಗಳ ತಂಡ ಕಾಸರಗೋಡು ನಗರಸಭಾ ಕಚೇರಿಗೆ ಗುರುವಾರ ದಾಳಿ ನಡೆಸಿದ್ದು, ಈ ಸಂದರ್ಭ ವಿವಿಧ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಪತ್ತೆಹಚ್ಚಿದೆ. ವಿಜಿಒಲೆನ್ಸ್ ಡಿವೈಎಸ್‍ಪಿ ಕೆ.ವಿ ವೇಣುಗೋಪಾಲ್ ನೇತೃತ್ವದ ಅಧಿಕಾರಿಗಳ ತಂಡ ತಪಾಸಣೆ ನಡೆಸಿದೆ. ಸ್ವಚ್ಛ ಭಾರತ್ ಮಿಷನ್, ಶುಚಿತ್ವ ಮಿಷನ್, ನಗರಸಭಾ ಫಂಡ್ ಬಳಸಿ ತ್ಯಾಜ್ಯ ನಿರ್ಮೂಲನೆಗಾಗಿ ಕಾಸರಗೋಡುನಗರಸಭಾ ವ್ಯಾಪ್ತಿಯಲ್ಲಿ ನಡೆಸಿರುವ ಬಯೋಗ್ಯಾಸ್ ಸಥಾವರ, ಕಾಂಪೋಸ್ಟ್ ಬಿನ್ ಇತ್ಯಾದಿ ಯೋಜನೆಗಳಲ್ಲಿ ಅವ್ಯವಹಾರ ನಡೆದಿರುವುದನ್ನು ಪತ್ತೆಹಚ್ಚಲಾಗಿದೆ.
ನಗರಸಭೆಯ ಬಹುತೇಕ ಯೋಜನೆಗಳು ಅಪೂರ್ಣಗೊಂಡಿದ್ದು, ತ್ಯಾಜ್ಯ ಸಂಸ್ಕರಣೆ ಹಾಗೂ ಕಾಂಪೋಸಿಟ್ ಬಿನ್ ವಿತರಣೆಯಲ್ಲೂ ಲೋಪವೆಸಗಿರುವುದು ಪತ್ತೆಯಾಗಿದೆ. ಕೆಲವೊಂದು ದಾಖಲು ಪತ್ರಗಳೂ ಕಡತದಿಂದ ನಾಪತ್ತೆಯಾಗಿರುವುದನ್ನು ವಿಜಿಲೆನ್ಸ್ ಗಂಭೀರವಾಗಿ ಪರಿಗಣಿಸಿದೆ. ಮೇಲ್ನೋಟಕ್ಕೆ ಭಾರಿ ಭ್ರಷ್ಟಾಚಾರ ಕಂಡು ಬಂದಿದ್ದು, ಇದಕ್ಕೆ ಕಾರಣರದವರನ್ನು ಪತ್ತೆಹಚ್ಚುವ ಹಾಗೂ ಹೆಚ್ಚಿನ ಅವ್ಯವಹಾರ ನಡೆದಿರುವುದನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಸರಗೋಡು ನಗರಸಭೆಗೆ ವಿಜಿಲೆನ್ಸ್ ದಾಳಿ-ವಿವಿಧ ಯೋಜನೆಗಳಲ್ಲಿ ಭ್ರಷ್ಟಾಚಾರ ಪತ್ತೆ
0
ಮಾರ್ಚ್ 10, 2023