ಉಪ್ಪಳ: ಕೊಂಡೆವೂರಿನಲ್ಲಿ ಕೃಷಿ ಬದುಕಿನ ಪಾಠ ಶಿಬಿರ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮಾ. 4ಮತ್ತು 5ರಂದು ಜರುಗಲಿದೆ. ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗಆಶ್ರಯದಲ್ಲಿ "ಕೃಷಿ ಬದುಕಿನ ಪಾಠ ಶಿಬಿರ" ಆಯೋಜಿಸಲಾಗಿದೆ.
ನಮ್ಮ ಅಡಿಗೆ ಮನೆಯನ್ನು ವಿಷಮುಕ್ತಗೊಳಿಸಿ,ಶುದ್ಧಆರೋಗ್ಯಕರ ಆಹಾರತಯಾರಿಗೆನಾವು ಮಾಡಬಹುದಾದ ಪ್ರಯತ್ನಗಳ ಮತ್ತು ಕೃಷಿ ಸಂಬಂಧಿ ವಿಷಯಗಳ ಕುರಿತು ಆಯಾಕ್ಷೇತ್ರಗಳ ಸಾಧಕರು ಮಾಹಿತಿ, ಮಾರ್ಗದರ್ಶನ ನೀಡಲಿದ್ದಾರೆ. ಮಾ. 4ರಂದುಬೆಳಗ್ಗೆ 10ಕ್ಕೆ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪಪ್ರಜ್ವಲನೆಗೈಯುವ ಮೂಲಕ ಶಿಬಿರ ಉದ್ಘಾಟಿಸುವರು. ಸಾವಯವ ಕೃಷಿಕ ಗ್ರಾಹಕ ಬಳಗದ ಗೌರವಾಧ್ಯಕ್ಷ, ಕನ್ನಡಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲೆಯ ನಿಕಟÀಪೂರ್ವ ಅಧ್ಯಕ್ಷ ಶ್ರೀಪ್ರದೀಪ್ ಕುಮಾರ್ ಕಲ್ಕೂರರವರು ಅಧ್ಯಕ್ಷತೆ ವಹಿಸುವರು. ಶಾರದಾ ಸಮೂಹಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕ್ಷಿತಿ(ಕಮಲಾಕ್ಷ) ಮಂಗಳೂರು ಅವರು ಶಿಬಿರಾüಕಾರಿಯಾಗಿರುತ್ತಾರೆ.