ಕಾಸರಗೋಡು: ತೆರುವತ್ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನಡಾವಳಿ ಮಹೋತ್ಸವ ಶುಕ್ರವಾರ ಆರಂಭಗೊಂಡಿತು. ಬ್ರಹ್ಮಶ್ರೀ ತಂತ್ರಿವರ್ಯ ಕಾವುಮಠ ಶ್ರೀ ವಿಷ್ಣುಪ್ರಕಾಶ್ ಕಾವುಮಠ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಬೆಳಗ್ಗೆ ಮಹಾಪೂಜೆ, ಶ್ರೀ ದೇವರ ನೃತ್ಯ ಬಲಿ ಉತ್ಸವ ನಡೆಯಿತು. ತಚ್ಚಂಗಾಡು ಶ್ರೀ ಲಕ್ಷ್ಮೀಕಾಂತ ಅಗ್ಗಿತ್ತಾಯ ಮತ್ತು ಶಿಷ್ಯಂದಿರು ನೃತ್ಯಬಲಿ ನಡೆಸಿಕೊಟ್ಟರು. 4ರಂದು ಬೆಳಗ್ಗೆ 8.20ರಿಂದ 9ಗಂಟೆ ನಡಾವಳಿ ಉತ್ಸವಕ್ಕೆ ಗೊನೆಕಡಿಯುವ ಮುಹೂರ್ತ ನಡೆಯುವುದು. 5ರಂದು ಬೆಳಗ್ಗೆ 9.30ಕ್ಕೆ ನಾಗತಂಬಿಲ, ರಾತ್ರಿ 10ರಿಂದ ಬ್ರಹ್ಮರಾಕ್ಷಸನಿಗೆ ವಿಶೇಷ ಪೂಜೆ ನಡೆಯುವುದು. 8ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ಕೊರಕ್ಕೋಡು ಹೊನ್ನೆಮೂಲೆ ಶ್ರೀ ಮಲ್ಲಿಕಾರ್ಜುನ ದಏವಸ್ಥಾನ ವಠಾರದಿಂದ ತೆರುವತ್ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣಾ ಮೆರವಣಿಗೆ, ನಂತರ ಉಗ್ರಾಣ ಮುಹೂರ್ತ ನಡೆಯುವುದು.
ಕಾಸರಗೋಡು ತೆರುವತ್ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಪ್ರತಿಷ್ಠಾ ವಾರ್ಷಿಕೋತ್ಸವ, ನಡಾವಳಿ ಮಹೋತ್ಸವ ಆರಂಭ
0
ಮಾರ್ಚ್ 03, 2023
Tags