ವಾರ್ಧಾ: ಇಲ್ಲಿ ನಡೆದ ಗಾಂಧಿ ಚಿಂತನೆಗಳ 48ನೇ ಸರ್ವೋದಯ ಸಮಾಜ ಸಮ್ಮೇಳನವು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜಾತ್ಯತೀತತೆಯನ್ನು ಉಳಿಸುವ ಪ್ರತಿ ಹೋರಾಟದಲ್ಲೂ ಭಾಗವಹಿಸುವ ನಿರ್ಣಯವನ್ನು ಅಂಗೀಕರಿಸಿದೆ.
ವಾರ್ಧಾದ ಸೇವಾಗ್ರಾಮ ಆಶ್ರಮದಲ್ಲಿ ಮೂರು ದಿನಗಳ ಕಾಲ ನಡೆದ ಸಮ್ಮೇಳನವು ಗುರುವಾರ ಸಮಾರೋಪಗೊಂಡಿತು.
ಸಮ್ಮೇಳನದಲ್ಲಿ 400 ಮಂದಿ ಗಾಂಧಿವಾದಿಗಳು ಸೇರಿದಂತೆ 22 ರಾಜ್ಯಗಳ ಸುಮಾರು 1,200 ಪ್ರತಿನಿಧಿಗಳು ಭಾಗವಹಿಸಿದ್ದರು.
ಸರ್ವೋದಯ ಮಂಡಲದ ಅಧ್ಯಕ್ಷ ಚಿನ್ಮಯ್ ಮಿಶ್ರಾ ಅವರು ಸಮ್ಮೇಳನದ ನಿರ್ಣಯಗಳನ್ನು ವಾಚಿಸಿ, 'ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜಾತ್ಯತೀತತೆಯನ್ನು ಉಳಿಸುವ ಪ್ರತಿಯೊಂದು ಹೋರಾಟದಲ್ಲಿ ಪಾಲ್ಗೊಳ್ಳಲು ಸಮ್ಮೇಳನವು ತೀರ್ಮಾನಿಸಿದೆ' ಎಂದರು.
ಈ ನಿರ್ಣಯವು ಮಹಾತ್ಮ ಗಾಂಧಿಯವರ ಸಂದೇಶವನ್ನು ಆಧರಿಸಿದೆ ಎಂದೂ ಅವರು ಹೇಳಿದರು.