ಬದಿಯಡ್ಕ: ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯ ವಾರ್ಷಿಕೋತ್ಸವವು ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳ ವಿವಿಧ ಕಾರ್ಯಕ್ರಮಗಳೊಂದಿಗೆ ಗುರುವಾರ ಜರಗಿತು.
ಬೆಳಗ್ಗೆ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಖಾಲಿದ್ ಬಾಪಾಲಿಪೊನಂ ಧ್ವಜಾರೋಹಣದೊಂದಿಗೆ ಚಾಲನೆ ನೀಡಿದರು. ನಂತರ ಶಾಲಾ ವಿದ್ಯಾರ್ಥಿಗಳ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು. ಅಪರಾಹ್ನ ನಡೆದ ಸಭಾ ಕಾರ್ಯಕ್ರಮವನ್ನು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಾ ಬಿ. ಉದ್ಘಾಟಿಸಿದರು. ಉಪಾಧ್ಯಕ್ಷ ಎಂ.ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ನಿವೃತ್ತರಾಗಲಿರುವ ಅಧ್ಯಾಪಕ ಕೃಷ್ಣನ್ ನಂಬೂದಿರಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ಬ್ಲಾಕ್ ಪಂಚಾಯಿತಿ ಸದಸ್ಯೆ ಜಯಂತಿ, ಗ್ರಾಪಂ ಸದಸ್ಯೆ ಜಯಶ್ರೀ, ಕುಂಬಳೆ ಉಪಜಿಲ್ಲಾ ಬಿಪಿಸಿ ಜಯರಾಮ ಜೆ., ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಶರ್ಮ, ಹಳೆವಿದ್ಯಾರ್ಥಿ ಹಾಗೂ ಪ್ರಸಿದ್ಧ ಎಲುಬು ತಜ್ಞ ವೈದ್ಯ ಡಾ. ನಾಗರಾಜ ಭಟ್, ನಿವೃತ್ತ ಮುಖ್ಯೋಪಾಧ್ಯಾಯರುಗಳಾದ ಅಪ್ಪಣ್ಣ ಮಾಸ್ತರ್, ಪಿ. ಮಹಾಲಿಂಗೇಶ್ವರ ಭಟ್, ಮಾತೃಸಂಘದ ಅಧ್ಯಕ್ಷೆ ಶೋಭಿತ ಸಿ.ಎಚ್., ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಜೋನ್ ಡಿಸೋಜ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಪ್ರಶಾಂತ ಕುಮಾರ್ ಬಿ., ಶುಭಾಶಂಸನೆಗೈದರು. ಶಾಲಾ ಮುಖ್ಯೋಪಾಧ್ಯಾಯ ವೆಂಕಟರಾಜ ಸ್ವಾಗತಿಸಿ, ಅಧ್ಯಾಪಕ ಎ.ರಾಧಾಕೃಷ್ಣನ್ ವಂದಿಸಿದರು. ಅಧ್ಯಾಪಕ ಟಿ.ಒ.ಉಣ್ಣಿಕೃಷ್ಣನ್ ವರದಿ ಮಂಡಿಸಿದರು. ಅಧ್ಯಾಪಕರುಗಳಾದ ಅಬ್ದುಲ್ ಸಲಾಂ ಪಿ., ಶರತ್ ಕುಮಾರ್ ಎಂ. ಕಾರ್ಯಕ್ರಮ ನಿರೂಪಿಸಿದರು.
ಕುಂಟಿಕಾನ ಶಾಲಾ ವಾರ್ಷಿಕೋತ್ಸವ, ಸನ್ಮಾನ
0
ಮಾರ್ಚ್ 04, 2023