ಕೊಟ್ಟಾಯಂ: ಶಬರಿಮಲೆಗಿರುವ ಸಾಂಪ್ರದಾಯಿಕ ಕಾಲ್ನಡಿಗೆ ಮಾರ್ಗದಲ್ಲಿ ಅವೈಜ್ಞಾನಿಕ ಸಮಯ ನಿರ್ಬಂಧ ಹಾಗೂ ಭಕ್ತಾದಿಗಳನ್ನು ತಡೆದು ಬೇರೆ ಹಾದಿಗೆ ತಿರುಗಿಸುವ ಕ್ರಮದ ವಿರುದ್ಧ ಮಲೆಅರಯ ಮಹಾಸಭಾ ಸಲ್ಲಿಸಿರುವ ದೂರಿನ ಅನ್ವಯ ರಾಷ್ಟ್ರೀಯ ಬುಡಕಟ್ಟು ಆಯೋಗ ತನಿಖೆ ಆರಂಭಿಸಿದೆ.
ಶಬರಿಮಲೆ ಯಾತ್ರೆಯು ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ ಮತ್ತು ಮಲೆಅರಯ ಸಮುದಾಯದ ಆರಾಧನಾ ಸ್ಥಳಗಳು ಸಹ ಶಬರಿಮಲೆ ದೇವಸ್ಥಾನಕ್ಕೆ ಪ್ರಯಾಣ ನಿರ್ಬಂಧವನ್ನು ಪರಿಚಯಿಸುವುದರಿಂದ ಅಪ್ರಸ್ತುತವಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದರೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗವನ್ನು ಸಂಪರ್ಕಿಸಲಾಗಿತ್ತು. ಮಲೆಅರಯ ಮಹಾಸಭಾದ ವತಿಯಿಂದ ಪ್ರಧಾನ ಕಾರ್ಯದರ್ಶಿ ಪಿ.ಕೆ. ಸಜೀವ್ ಎಂಬುವರು ದೂರು ದಾಖಲಿಸಿದ್ದರು.
ಅರ್ಜಿಯ ಬಳಿಕÀ, ಆಯೋಗವು ತುರ್ತು ವರದಿಯನ್ನು ಸಲ್ಲಿಸುವಂತೆ ಪತ್ತನಂತಿಟ್ಟ ಜಿಲ್ಲಾಧಿಕಾರಿ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನೋಟಿಸ್ ಕಳುಹಿಸಿದೆ. 15 ದಿನದೊಳಗೆ ವರದಿ ಸಲ್ಲಿಸದಿದ್ದರೆ ಖುದ್ದು ಹಾಜರಾಗಬೇಕು ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ. ರಾಷ್ಟ್ರೀಯ ಪರಿಶಿಷ್ಟ ಪಂಗಡ ಆಯೋಗದ ಮನವಿಗಳು ಮತ್ತು ಪ್ರತಿಭಟನೆಗಳ ಕಾರಣ ಈ ಬೆಳವಣಿಗೆಗಳು ಸಂಭವಿಸಿವೆ.
ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿ ಮತ್ತು ಸಿಸಿಎಫ್ ಮಟ್ಟದಲ್ಲಿ ಮಧ್ಯಸ್ಥಿಕೆಗಳ ನಿಖರ ವರದಿಯನ್ನು ಆಯೋಗ ಕೇಳಿದೆ. ಸಾಂಪ್ರದಾಯಿಕ ಯಾತ್ರಾ ಮಾರ್ಗಕ್ಕೆ ಪಾರಂಪರಿಕ ಸ್ಥಾನಮಾನವನ್ನು ಘೋಷಿಸಬೇಕು ಎಂದು ಮಲೆಅರಯ ಸಮುದಾಯ ಸಂಘಟನೆ ಒತ್ತಾಯಿಸುತ್ತಿದೆ.
ನಿರ್ಬಂಧಗಳಿಂದಾಗಿ ಇರುಂಬುನ್ನಿಕರ, ಕಲಕೆಟ್ಟಿ, ಆನಕಲ್ಲು, ಮೂಝಿಕಲ್, ಮುಕ್ಕುಜಿ, ಇಂಚಿಪಾರಕೋಟ ಮತ್ತು ಕರಿಮಲ ಮೊದಲಾದ ಕಾನನಪಥದ ಹಲವು ಪವಿತ್ರ ಸ್ಥಳಗಳ ಪ್ರಾಮುಖ್ಯತೆ ಕಳೆದುಹೋಗುತ್ತದೆ. ಹಿಂದಿನ ವರ್ಷಗಳಲ್ಲಿ ಕೋವಿಡ್ ಹೆಸರಿನಲ್ಲಿ ರಸ್ತೆಗೆ ನಿರ್ಬಂಧ ಹೇರಿದ್ದರೆ, ಕಳೆದಬಾರಿ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣ ನೀಡಿ ನಿರ್ಬಂಧ ಹೇರಲಾಗಿತ್ತು.
ಶಬರಿಮಲೆ ಸಾಂಪ್ರದಾಯಿಕ ಕಾನನ ರಸ್ತೆ ಮುಚ್ಚಿದ ಘಟನೆ: ಯಾತ್ರೆಯ ಮಹತ್ವ ಕಳೆದುಕೊಳ್ಳಲಿದೆ ಎಂಬ ದೂರಿನ ಮೇರೆಗೆ ರಾಷ್ಟ್ರೀಯ ಬುಡಕಟ್ಟು ಆಯೋಗ ತನಿಖೆ ಆರಂಭ
0
ಮಾರ್ಚ್ 10, 2023
Tags