ಕಾಸರಗೋಡು: ನಗರದ ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಮೇ 19 ರಂದು ನಡೆಯಲಿರುವ ಸಾಮೂಹಿಕ ಮಹಾ ಚಂಡಿಕಾ ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶ್ರೀ ಧರ್ಮಸ್ಥಳದಲ್ಲಿ ಜರುಗಿತು.
ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಅನುಗ್ರಹಿಸಿದರು. ಈ ಸಂದರ್ಭದಲ್ಲಿ ಯಾಗ ಸಮಿತಿ ಅಧ್ಯಕ್ಷರಾದ ಕೆ.ಎನ್ ವೆಂಕಟ್ರಮಣ ಹೊಳ್ಳ, ಗೌರವಧ್ಯಕ್ಷ ಅರಿಬೈಲ್ ಗೋಪಾಲ ಶೆಟ್ಟಿ, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಪ್ರದಾನ ಕಾರ್ಯದರ್ಶಿ ಪ್ರದೀಪ್ ಬೇಕಲ್, ಕೋಶಾಧಿಕಾರಿ ಕೆ.ಕಮಲಾಕ್ಷ ಅಣಂಗೂರ್, ಪಾಂಗೋಡು ಕ್ಷೇತ್ರ ಸಮಿತಿ ಅಧ್ಯಕ್ಷ ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ಟೀಚರ್ ಜತೆಗಿದ್ದರು.
ಸಾಮೂಹಿಕ ಮಹಾ ಚಂಡಿಕಾ ಯಾಗ-ಆಮಂತ್ರಣ ಪತ್ರಿಕೆ ಬಿಡುಗಡೆ
0
ಮಾರ್ಚ್ 28, 2023