ಕಾಸರಗೋಡು: ಆದೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯದ ಮಧ್ಯೆ ಪೊಲೀಸ್ ಅಧಿಕಾರಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಠಾಣೆಯ ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿ, ಅಡೂರು ಪೆರ್ಲಡ್ಕ ಕರಿಪ್ಪಾಡಗಂ ನಿವಾಸಿ ಅಶೋಕನ್(47)ಮೃತಪಟ್ಟವರು.
ಠಾಣೆಯಲ್ಲಿ ಜಿ.ಡಿ ಡ್ಯೂಟಿಯಲ್ಲಿದ್ದ ಅಶೋಕನ್ ಅವರು ಬೆಳಗ್ಗೆ ಶೌಚಗೃಹಕ್ಕೆ ತೆರಳಿದ್ದು, ಬಹಳ ಹೊತ್ತಿನ ವರೆಗೂ ಆಗಮಿಸದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ನೋಡಿದಾಗ ಕುಸಿದು ಬಿದ್ದ ಸ್ಥಿತಿಯಲ್ಲಿದ್ದರು. ತಕ್ಷಣ ಇವರನ್ನು ಮುಳ್ಳೇರಿಯಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮೃತದೇಹ ಕಾಸರಗೊಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಿದ ನಂತರ ಕಾಸರಗೋಡು ಪಾರೆಕಟ್ಟೆಯ ಜಿಲ್ಲಾ ಪೊಲೀಸ್ ಕೇಂದ್ರದಲ್ಲಿ ಹಾಗೂ ಆದೂರು ಠಾಣೆಯಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಿದ ಬಳಿಕ ಅವರ ಮನೆಗೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಸಲಾಯಿತು.
ದಿ.ರಾಮ ಮಣಿಯಾಣಿ-ಕಲ್ಯಾಣಿ ದಂಪತಿ ಪುತ್ರನಾದ ಇವರು 2005ರಲ್ಲಿ ಪೊಲೀಸ್ ಇಲಾಖೆ ಸೇರ್ಪಡೆಗೊಂಡಿದ್ದು, ರೈಲ್ವೆ ಪೊಲೀಸ್, ಕಾಸರಗೋಡು, ಬೇಡಡ್ಕ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಕರ್ತವ್ಯದ ಮಧ್ಯೆ ಆದೂರು ಠಾಣೆ ಸಿವಿಲ್‍ಪೊಲೀಸ್ ಅಧಿಕಾರಿ ಕುಸಿದು ಬಿದ್ದು ಮೃತ್ಯು
0
ಮಾರ್ಚ್ 30, 2023