ನವದೆಹಲಿ: ಕೋವಿಡ್ ರೂಪಾಂತರ ತಳಿ ನಿರೋಧಕ ಲಸಿಕೆ ಪಡೆದಿರುವ ಜನರು ದೀರ್ಘಾವಧಿಯಲ್ಲಿ ಕೋವಿಡ್ ಸೋಂಕು ಭೀತಿ ತಗುಲುವ ಅಪಾಯದ ಸಾಧ್ಯತೆ ಹೆಚ್ಚಿದೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ.
ಅಧ್ಯಯನ ವರದಿಯನ್ನು ಜಾಮಾ ಇಂಟರ್ನಲ್ ಮೆಡಿಸಿನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಸುಮಾರು 860,000ಕ್ಕೂ ಅಧಿಕ ರೋಗಿಗಳ ಅಭಿಪ್ರಾಯ ಪಡೆಯಲಾಗಿದೆ. ಅಧಿಕ ತೂಕವುಳ್ಳವರು, ಮಹಿಳೆಯರು, ಧೂಮಪಾನಿಗಳು ಹಾಗೂ 40 ವರ್ಷ ಮೀರಿದವವರು ದೀರ್ಘಾವಧಿಯ ಕೋವಿಡ್‌ನಿಂದ ಬಳಲುವ ಸಾಧ್ಯತೆಗಳಿವೆ ಎಂದು ವರದಿ ಎಚ್ಚರಿಸಿದೆ.
ಬ್ರಿಟನ್‌ನ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾಲಯದ (ಯುಇಎ) ಸಂಶೋಧಕರು, ದೀರ್ಘಾವಧಿಯ ಕೋವಿಡ್ ಸಮಸ್ಯೆಯ ಜೊತೆಗೆ ಆಸ್ತಮಾ, 2ನೇ ಹಂತದ ಮಧುಮೇಹ, ಹೃದಯನಾಳ ಸಮಸ್ಯೆ, ಖಿನ್ನತೆ, ಉದ್ವೇಗ ಸಮಸ್ಯೆಗಳು ಇರಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಗಂಭೀರ ಸಮಸ್ಯೆಯಿಂದ ಬಳಲಿದವರೂ ಈ ಸಮಸ್ಯೆಗೆ ತುತ್ತಾಗಬಹುದು.
ಕೋವಿಡ್ ಬಾಧಿತರಲ್ಲಿ ಕಂಡುಬರುವ ಒಂದು ರೀತಿಯ ಸಂಕೀರ್ಣ ಸ್ಥಿತಿಯೇ ದೀರ್ಘಾವಧಿಯ ಕೋವಿಡ್. ಇದರ ಲಕ್ಷಣಗಳು 12 ವಾರದವರೆಗೂ ಕಾಣಿಸುತ್ತವೆ ಎಂದು ಯುಇಎನ ಪ್ರೊ. ವಾಸ್ಸಿಲಿಯೊಸ್ ವಾಸ್ಸಿಲಿಯು ಪ್ರತಿಕ್ರಿಯಿಸಿದರು.
860,783 ರೋಗಿಗಳಿಗೆ ಸಂಬಂಧಿಸಿದ ವಿಶ್ವದಾದ್ಯಂತ ಸುಮಾರು 41 ಅಧ್ಯಯನಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಅಧ್ಯಯನಕ್ಕೆ ಪರಿಗಣಿಸಲಾಗಿದೆ ಎಂದು ಹೇಳಿದರು.