ಮುಂಬೈ:ಟ್ವಿಟರ್ ಹಾಗೂ ಅದರ ಮುಖ್ಯಸ್ಥ ಎಲಾನ್ ಮಸ್ಕ್ ವಿರುದ್ಧ
ಮುಂಬೈ ಮೂಲದ ಪತ್ರಕರ್ತರೊಬ್ಬರು ತಮ್ಮ ಪರಿಕಲ್ಪನೆಯನ್ನು ಕದ್ದಿರುವ ಬಗ್ಗೆ ಗಂಭೀರ ಆರೋಪ
ಮಾಡಿದ್ದಾರೆ.
ಆಡಳಿತದ ಮುಖ್ಯಸ್ಥರು ಸೇರಿದಂತೆ ಪ್ರಮುಖ ವ್ಯಕ್ತಿಗಳಿಗೆ ಹೊಸ ಲೇಬಲ್ ಅಥವಾ ಹೊಸ ಟಿಕ್
ನೀಡುವುದು ತಮ್ಮ ಪರಿಕಲ್ಪನೆಯಾಗಿತ್ತು ಎಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ನೀಡಿರುವ
ದೂರಿನಲ್ಲಿ ಪತ್ರಕರ್ತ ರೂಪೇಶ್ ಸಿಂಗ್ ಆರೋಪಿಸಿದ್ದು, ಭಾರತೀಯ ದಂಡ ಸಂಹಿತೆ ವಿಭಾಗ 420
(ವಂಚನೆ), 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ), 120B (ಅಪರಾಧದ ಪಿತೂರಿ) ಮತ್ತು
ಹಕ್ಕುಸ್ವಾಮ್ಯ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಾ.01 ರಂದು ಪತ್ರಕರ್ತ ರೂಪೇಶ್ ಸಿಂಗ್ ದೂರು ನೀಡಿದ್ದು, ಎಲಾನ್ ಮಸ್ಕ್ ಜೊತೆಗೆ ಟ್ವಿಟರ್ ನ ಮಾಜಿ ಭಾರತದ ಮುಖ್ಯಸ್ಥ ಮನೀಷ್ ಮಹೇಶ್ವರಿ ವಿರುದ್ಧವೂ ದೂರು ದಾಖಲಿಸಿದ್ದಾರೆ. ಪತ್ರಕರ್ತ, ಲೇಖಕ ಹಾಗೂ ನಿರ್ದೇಶಕರೂ ಆಗಿರುವ ಸಿಂಗ್, ಟ್ವಿಟರ್ ನಲ್ಲಿ ಸಕ್ರಿಯವಾಗಿದ್ದಾರೆ.