ಕಾಸರಗೋಡು: ಪ್ರಯಾಣ ಅನಿವಾರ್ಯವಾಗಿರುವ ಇಂದಿನ ಕಾಲಘಟ್ಟದಲ್ಲಿ ರಸ್ತೆ ಬದಿಯ ವಿಶ್ರಾಂತಿ ಕೇಂದ್ರಗಳು ತುರ್ತು ಅಗತ್ಯಗಳಲ್ಲಿ ಒಂದಾಗಿರುವುದಾಗಿ ಬಂದರು ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ಅಹ್ಮದ್ ದೇವರಕೋವಿಲ್ ತಿಳಿಸಿದ್ದಾರೆ.
ಅವರು ಕಾಞಂಗಾಡ್ ಬ್ಲಾಕ್ ಪಂಚಾಯತ್ ವತಿಯಿಂದ ಪಳ್ಳಿಕ್ಕೆರೆಯಲ್ಲಿ ನಿರ್ಮಿಸಲಾಗಿರುವ ವಿಶ್ರಾಂತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು
ಶಾಸಕ ಸಿ.ಎಚ್.ಕುಂಜಂಬು ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಪ್ರವಾಸಿಗರನ್ನು ಸೆಳೆಯುತ್ತಿರುವ ಕೇರಳವನ್ನು ತ್ಯಾಜ್ಯಮುಕ್ತಗೊಳಿಸುವ ಮಹತ್ವದ ಯೋಜನೆಗೆ ಸರ್ಕಾರ ರೂಪು ನೀಡಲಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ಪ್ರವಾಸಿಗರು, ದೂರದೂರಿಂದ ಆಗಮಿಸುವ ಪ್ರಯಾಣಿಕರಿಗೆ ರಸ್ತೆಬದಿಯ ವಿಶ್ರಾಂತಿ ನಿಲ್ದಾಣಗಳು ಹೆಚ್ಚು ಪ್ರಯೋಜನಕಾರಿಯಾಗಿದ್ದು, ಈ ಯೋಜನೆಯನ್ನು ಬ್ಲಾಕ್ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳಲ್ಲೂ ಅನುಷ್ಠಾನಗೊಳಿಸುವಂತಾಗಬೇಕು ಎಂದು ತಿಳಿಸಿದರು. ಈ ಸಂದರ್ಭ ಕಾಞಂಗಾಡು-ಕಾಸರಗೋಡು ರಾಜ್ಯ ಹೆದ್ದಾರಿಯಲ್ಲಿನ ಪಳ್ಳಿಕ್ಕರ ಟೇಕ್ ಎ ಬ್ರೇಕ್ ರೆಸ್ಟ್ ಸೆಂಟರನ್ನು ಸಚಿವ ಅಹ್ಮದ್ ದೇವರ್‍ಕೋವಿಲ್ ಉದ್ಘಾಟಿಸಿದರು.
ಶಾಸಕ ಸಿ.ಎಚ್.ಕುಂಜಂಬು ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಅಭಿಯಂತರ ವಿ. ಮಿತ್ರ ವರದಿ ಮಂಡಿಸಿದರು. ಪಳಿಕ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಕುಮಾರನ್, ಕಾಞಂಗಾಡು ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ,ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ವಿಜಯನ್, ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಜ್ನೀಮ್ ವಹಾಬ್, ಬ್ಲಾಕ್ ಪಂಚಾಯಿತಿ ಸದಸ್ಯೆ ಶಕೀಲಾ ಬಶೀರ್ ವಿ.ಗೀತಾ, ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಸೂರಜ್, ಪಂಚಾಯಿತಿ ಸದಸ್ಯರಾದ ವಿ.ಕೆ.ಅನಿತಾ, ಟಿ.ಸಿದ್ದೀಕ್ ಪಲ್ಲಿಪುಳ ಬಿಆರ್‍ಡಿಸಿ ವ್ಯವಸ್ಥಾಪಕ ನಿರ್ದೇಶಕ ಪಿ. ಶಿಜಿನಿ, ನೈರ್ಮಲ್ಯ ಮಿಷನ್ ಪ್ರತಿನಿಧಿ ಎಂ.ಎ ಮುದಾಸಿರ್, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಟಿ.ಸಿ.ಸುರೇಶ್, ಕೆ.ಇ.ಎ.ಬಕರ್, ಲಿಜು ಅಬೂಬಕರ್, ಸುಕುಮಾರನ್ ಪೂಚ್ಕಾಡ್, ಪಳ್ಳಿಕ್ಕರ ಸಹಕಾರಿ ಗ್ರಾಹಕರ ಕಲ್ಯಾಣ ಸಂಘದ ಅಧ್ಯಕ್ಷ ಪಿ.ಕೆ.ಅಬ್ದುಲ್ಲಾ, ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷ ವಿ. ಸುಮತಿ ಉಪಸ್ಥಿತರಿದ್ದರು. ಕೆ.ಮಣಿಕಂಠನ್ ಸ್ವಾಗತಿಸಿದರು. ಕಾರ್ಯದರ್ಶಿ ಪಿ. ಯುಜೀನ್ ವಂದಿಸಿದರು.
ಪಳ್ಳಿಕೆರೆಯಲ್ಲಿ ರಸ್ತೆಬದಿ ವಿಶ್ರಮ ಕೇಂದ್ರ 'ಟೇಕ್ ಎ ಬ್ರೇಕ್' ಸಚಿವರಿಂದ ಲೋಕಾರ್ಪಣೆ
0
ಮಾರ್ಚ್ 20, 2023