ನವದೆಹಲಿ :ತನ್ನ ಪಕ್ಷದ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರಿಗೆ "ಸಾರ್ವಜನಿಕವಾಗಿ ಅವಮಾನ" ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕೆಂದು ಮುಂಬೈ ಪ್ರೆಸ್ ಕ್ಲಬ್ ಶನಿವಾರದಂದು ಕರೆ ನೀಡಿದೆ.
ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆ ಅನುಭವಿಸಿ, ನಂತರ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹವಾಗಿರುವ ಬಗ್ಗೆ ಕೇಳಿದಾಗ, ರಾಹುಲ್ ಗಾಂಧಿಯವರು ತಾಳ್ಮೆಯನ್ನು ಕಳೆದುಕೊಂಡರು. ವರದಿಗಾರನ ಅವಮಾನಿಸಿದರು ಎಂದು ಕ್ಲಬ್ ಹೇಳಿದೆ.
'ನೀವು ಏಕೆ ನೇರವಾಗಿ ಬಿಜೆಪಿ ಪರ ಕೆಲಸ ಮಾಡುತ್ತಿದ್ದೀರಿ? ನೀವು ಬಿಜೆಪಿಗಾಗಿ ಕೆಲಸ ಮಾಡಲು ಬಯಸಿದರೆ, ಬಿಜೆಪಿ ಬ್ಯಾಡ್ಜ್ ಧರಿಸಿ. ಪ್ರೆಸ್‌ಮ್ಯಾನ್‌ನಂತೆ ನಟಿಸಬೇಡಿ... ಕ್ಯೂ ಹವಾ ನಿಕಲ್ ಗಯಿ?"ಎಂದು ರಾಹುಲ್ ಗಾಂಧಿ ಹೇಳಿದರು.