ನವದೆಹಲಿ: ಮಾಜಿ ವಿಶ್ವಸುಂದರಿ, ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರು ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಸುಶ್ಮಿತಾ ಸೇನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಈ ವಿಚಾರ ಬಹಿರಂಗವಾಗುತ್ತಿದ್ದಂತೆ, ಅವರ ಅಭಿಮಾನಿಗಳು ಬೇಗನೆ ಗುಣಮುಖರಾಗುವಂತೆ ಹಾರೈಸಿದ್ದಾರೆ.
47 ವರ್ಷದ ಸುಶ್ಮಿತಾ ಸೇನ್ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದು, ಸ್ಟಂಟ್ ಅಳವಡಿಸಲಾಗಿದೆ. ಸದ್ಯ ಅಪಾಯದಿಂದ ಪಾರಾಗಿದ್ದಾರೆ. ತನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಅಭಿಮಾನಿಗಳಿಗೆ ಇದೀಗ ಧನ್ಯವಾದ ತಿಳಿಸಿದ್ದಾರೆ.
ನಿಮ್ಮ ಹೃದಯವನ್ನುಸದಾ ಸಂತೋಷದಿಂದ ಹಾಗು ಧೈರ್ಯದಿಂದ ಇರುವಂತೆ ನೋಡಿಕೊಳ್ಳಿ. ಹೀಗಿದ್ದಾಗ ಮಾತ್ರ ಅಗತ್ಯದ ಸಂದರ್ಭದಲ್ಲಿ ಹೃದಯ ನಿಮ್ಮೊಂದಿಗೆ ನಿಲ್ಲುತ್ತದೆ. ಒಂದೆರಡು ದಿನಗಳ ಹಿಂದೆ ನನಗೆ ಹೃದಯಾಘಾತ ಸಂಭವಿಸಿದೆ. ಆಂಜಿಯೋಪ್ಲಾಸ್ಟಿ ಮಾಡಲಾಗಿದ್ದು, 'ನನಗೆ ದೊಡ್ಡ ಹೃದಯವಿದೆ' ಎಂಬುದನ್ನು ವೈದ್ಯರು ಹೇಳಿದ್ದಾರೆ. ಮತ್ತೆ ಜೀವನ ಸಾಗಿಸಲು ಸಿದ್ಧಳಾಗಿದ್ದೇನೆ ಎಂದು ಸುಶ್ಮಿತಾ ಸೇನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.