ಕಾಸರಗೋಡು: ಪಿಲಿಕೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸಕ್ತ ವರ್ಷದ ವ್ಯಾಪಾರ ಮತ್ತು ಕೈಗಾರಿಕೆ ಸಂಸ್ಥೆಗಳ ಪರವಾನಗಿ ನವೀಕರಣಕ್ಕೆ ಮುಂಗಡ ಮೊತ್ತವನ್ನು ಮಾರ್ಚ್ 31 ರೊಳಗೆ ದಂಡವಿಲ್ಲದೆ ಪಾವತಿಸಬಹುದಗಿದೆ. ಮಾ.30ರಂದು ಪಿಲಿಕೋಡು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಇದಕ್ಕೆ ಸಂಬಂಧಿಸಿದ ಶಿಬಿರ ನಡೆಸಲಾಗುವುದು ಸಂಬಂಧಪಟ್ಟವರು ಈ ಅವಕಾಶವನ್ನು ಗರಿಷ್ಠವಾಗಿ ಬಳಸಿಕೊಳ್ಳಬೇಕು ಮತ್ತು ಕಾನೂನು ಕ್ರಮಗಳಿಂದ ತಪ್ಪಿಸಬೇಕು. ಅಲ್ಲದೆ ಕಟ್ಟಡ ತೆರಿಗೆ, ಕಾರ್ಮಿಕ ತೆರಿಗೆ, ಇತರೆ ತೆರಿಗೆ ಪಾವತಿಸಲು ಬಾಕಿ ಇರುವವರು ಈ ಮೊತ್ತವನ್ನು ಪಾವತಿಸುವಂತೆಯೂ ಕಾರ್ಯದರ್ಶಿ ಪ್ರಕಟಣೆ ತಿಳಿಸಿದೆ.
ವ್ಯಾಪಾರ, ಕೈಗಾರಿಕಾ ಸಂಸ್ಥೆಗಳ ಪರವಾನಗಿ-ದಂಡವಿಲ್ಲದೆ ನವೀಕರಣಕ್ಕೆ ಅವಕಾಶ
0
ಮಾರ್ಚ್ 28, 2023