ಕಾಸರಗೋಡು: 2016 ರ ವಿಧಾನಸಭಾ ಚುನಾವಣಾ ವಿಜಯೋತ್ಸವದ ಮರೆಯಲ್ಲಿ ನಡೆದ ದಾಳಿಯಲ್ಲಿ ಸಿಪಿಎಂ ಪ್ರದೇಶ ಕಾರ್ಯದರ್ಶಿ ಸೇರಿದಂತೆ ಏಳು ಮಂದಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಕಾಸರಗೋಡು ಕುಂಬಳೆಯಲ್ಲಿ ಘಟನೆ ನಡೆದಿತ್ತು. ಸಿಪಿಎಂ ಕುಂಬಳೆ ಏರಿಯಾ ಕಾರ್ಯದರ್ಶಿ ಇಚ್ಲಂಗೋಡ್ ನ ಸಿಎ ಜುಬೈರ್‍ಗೆ ನ್ಯಾಯಾಲಯ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸಿಪಿಎಂ ಕಾರ್ಯಕರ್ತರಾದ ಸಿದ್ದಿಕ್ ಕಾರ್ಲೆ, ಸಕ್ಬೀರ್, ಅಬ್ಬಾಸ್ ಜಾಫರ್, ಸಿಜು, ನಿಜಾಮುದ್ದೀನ್ ಮತ್ತು ಫರ್ಹಾನ್ ಅವರಿಗೂ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಕಾಸರಗೋಡು ಸಬ್ ಕೋರ್ಟ್ ಶಿಕ್ಷೆ ವಿಧಿಸಿದೆ.
2016 ರಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಪಿ.ಬಿ.ಅಬ್ದುಲ್ ರಝಾಕ್ ಗೆಲುವಿನ ಸಂಭ್ರಮಾಚರಣೆ ವೇಳೆ ಈ ದಾಳಿ ನಡೆದಿತ್ತು. ದಾಳಿಯಲ್ಲಿ ಹಲವರು ಗಾಯಗೊಂಡಿದ್ದರು. ಆರಿಕ್ಕಾಡಿ ನಿವಾಸಿ ಹಸೈನಾರ್ ಎಂಬವರ ದೂರಿನ ಮೇರೆಗೆ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. ಸಿಎ ಸುಬೈರ್ ಪ್ರಕರಣದ ಮೊದಲ ಆರೋಪಿ.
ಚುನಾವಣೆ ವಿಜಯೋತ್ಸವದ ವೇಳೆ ದಾಳಿ; ಕುಂಬಳೆಯ ಸಿಪಿಎಂ ಪ್ರದೇಶ ಕಾರ್ಯದರ್ಶಿ ಸೇರಿದಂತೆ ಏಳು ಮಂದಿಗೆ ಜೈಲು ಶಿಕ್ಷೆ
0
ಮಾರ್ಚ್ 31, 2023