ಕಾಸರಗೋಡು:ಯೋಜನೆಯ ಏಕೀಕರಣದ ಸಾಧ್ಯತೆಗಳನ್ನು ಪಾರದರ್ಶಕಗೊಳಿಸಿ ತ್ಯಾಜ್ಯ ಮುಕ್ತ ಎಂಬ ಜಿಲ್ಲೆ ಕನಸನ್ನು ನನಸಾಗಿಸುವತ್ತ ದಿಟ್ಟ ಹೆಜ್ಜೆ ಇಟ್ಟು ನವಕೇರಳ ಒಂದು ದಿನದ ಕಾರ್ಯಾಗಾರ ನಡೆಯಿತು. ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆಯು ಕಾಸರಗೋಡು ಜಿಲ್ಲಾ ಮಾಹಿತಿ ಕಛೇರಿಯ ನೇತೃತ್ವದಲ್ಲಿ ನವಕೇರಳ ಯೋಜನೆಯ ಸಹಯೋಗದೊಂದಿಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಆಡಳಿತ ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಯೋಜನಾ ಸಮಿತಿ ಕಾರ್ಯಕರ್ತರಿಗಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಮುಖ್ಯ ಅತಿಥಿಯಾಗಿದ್ದರು.
ಯೋಜನೆಗಳನ್ನು
ಕೈಗೆತ್ತಿ ರೂಪೀಕರಿಸುವಾಗ ದೇಶದ ಅಭಿವೃದ್ಧಿಯ ಪಥ ತಾನಾಗಿ ತೆರೆದುಕೊಳ್ಳುವುದು. ಉತ್ತಮ
ಯೋಜನೆಗಳನ್ನು ರೂಪೀಕರಿಸಲು ಏಕೀಕರಣದ ಪ್ರಯೋಜನವನ್ನು ಪಡೆಯಲು ನಮಗೆ ಸಾಧ್ಯ
ವಾಗಬಹುದೆಂದು ಪಿ. ಬೇಬಿ ಬಾಲಕೃಷ್ಣನ್ ಹೇಳಿದರು. ತ್ಯಾಜ್ಯ ನಿರ್ವಹಣೆಯನ್ನು
ಸಕಾಲದಲ್ಲಿ ಸ್ಥಳೀಯಾಡಳಿತ ಸರಕಾರಗಳು ನಿರ್ವಹಿಸಬೇಕು ಕರ್ತವ್ಯ ಲೋಪ ಎಸಗುವವರ ವಿರುದ್ಧ
ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಸ್ಥಳೀಯಾಡಳಿತ ಸಂಸ್ಥೆಯ ಸಹನಿರ್ದೇಶಕ ಜೇಸನ್ ಮಾಥ್ಯೂ ಅಧ್ಯಕ್ಷತೆ ವಹಿಸಿದ್ದರು.
ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಮುಂದಿರಿಸಿಕೊಂಡು ಯೋಜನೆಗಳನ್ನು ಸಿದ್ಧಪಡಿಸಬೇಕು
ಎಂದು ಮಾದರಿ ಸ್ಥಳೀಯಾಡಳಿತ ಸಂಸ್ಥೆಗಳನ್ನಾಗಿ ನಮ್ಮ ಸ್ಥಳೀಯಾಡಳಿತ ಸಂಸ್ಥೆಗಳನ್ನು
ಬದಲಾಯಿಸಬೇಕೆಂದು ಹೇಳಿದರು. ತ್ಯಾಜ್ಯ ನಿರ್ವಹಣೆ ಹಾಗೂ ಮಳೆಗಾಲದ ಸ್ವಚ್ಛತೆ ಕುರಿತು
ಮಾತನಾಡಿದರು. ವಲಿಯಪರಂಬ ಪಂಚಾಯತ್ ನ ಎಲ್ಲಾ ವಾರ್ಡ್‌ಗಳಲ್ಲಿ ಮಳೆಗಾಲದ ಸ್ವಚ್ಛತಾ
ಕಾರ್ಯಗಳನ್ನು ಪೂರ್ಣಗೊಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ
ಯೋಜನಾಧಿಕಾರಿ ಎ. ಎಸ್. ಮಾಯಾ, ಸಂಯೋಜಿತ ಸಾಧ್ಯತೆಗಳು ಎಂಬ ವಿಷಯದ ಕುರಿತು ಕಾಸರಗೋಡು
ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ. ಪಿ. ರಾಜ್ ಮೋಹನ್, ಕಸ ಮುಕ್ತ ಅಭಿಯಾನ ಎಂಬ
ವಿಷಯದ ಕುರಿತು ನೈರ್ಮಲ್ಯ ಮಿಷನ್ ಸಂಯೋಜಕಿ ಎ. ಲಕ್ಷ್ಮಿ, ಜಿಲ್ಲಾ ನೈರ್ಮಲ್ಯ ಮಿಷನ್
ಕಾರ್ಯಕ್ರಮ ಅಧಿಕಾರಿ ಕೆ ವಿ ರಂಜಿತ್ ಎಂಬಿವರು ತರಗತಿ ನಡೆಸಿ ಕೊಟ್ಟರು. ನೀರಿನ
ಮಾಸ್ಟರ್ ಪ್ಲಾನ್ ತಯಾರಿಯ ವಿಷಯದ ಬಗ್ಗೆ ಎಮ್ ಜಿ ಎನ್ ಆರ್ ಇ ಜಿ ಜಂಟಿ ಕಾರ್ಯಕ್ರಮ
ಸಂಯೋಜಕ ಅಧಿಕಾರಿ ಕೆ. ಪ್ರದೀಪನ್, ಲೈಫ್ ಎಂಬ ವಿಷಯದ ಬಗ್ಗೆ ಲೈಫ್ ಜಿಲ್ಲಾ ಸಂಯೋಜಕರಾದ
ಅನೀಶ್ ಜೆ. ಅಲೈಕ್ಕಾ ಪಳ್ಳಿ, ಜಲ ಬಜೆಟ್ ನಿಂದ ಜಲ ಸುರಕ್ಷಾ ಯೋಜನೆಗೆ ಎಂಬ ವಿಷಯದ
ಬಗ್ಗೆ ಅಸಿಸ್ಟಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಿ ಎಲ್ ಟಿ ಸಿ ಸಂಚಾಲಕ
ಕಾಞಂಗಾಡ್ ಎ. ಪಿ. ಸುಧಾಕರನ್ ಹಸಿರು ಕೇರಳ ಮಿಷನ್ ಮುಂದುವರಿಕೆ ಚಟುವಟಿಕೆಗಳ ಕುರಿತು ಹಸಿರು ಕೇರಳ ಮಿಷನ್ ಜಿಲ್ಲಾ ಕೊ-ಆರ್ಡಿನೇಟರ್ ಕೆ.ಬಾಲಕೃಷ್ಣನ್,
ಸ್ವಚ್ಛ ಸಾರ್ವಜನಿಕ ಸಂಸ್ಥೆಗಳು, ಗ್ರೇಡಿಂಗ್ ಹರಿತ ಕರ್ಮಸೇನೆ ಎಂಬ ವಿಷಯದ
ಕುರಿತು ಎಲ್ ಎಸ್ ಜಿ ಡಿ ಡೆಪ್ಯೂಟಿ ಡೈರೆಕ್ಟರ್ ಕೆ. ವಿ. ಹರಿದಾಸ್ ಎಂಬಿವರು ತರಗತಿ
ನಡೆಸಿ ಕೊಟ್ಟರು. ಉಪ ಜಿಲ್ಲಾ ಯೋಜನಾಧಿಕಾರಿ ನೆನೋಜ್ ಮೆಪ್ಪಾಟಿಯತ್ ಸಂಚಾಲಕರಾಗಿ
ಜಿಲ್ಲಾ ವಾರ್ತಾಧಿಕಾರಿ ಎಂ. ಮಧುಸೂದನನ್ ಸ್ವಾಗತಿಸಿ, ನವಕೇರಳ ಕರ್ಮಪದ್ಧತಿ ಸಂಪನ್ಮೂಲ
ವ್ಯಕ್ತಿ ಕೆ. ಕೆ. ರಾಘವನ್ ಧನ್ಯವಾದವಿತ್ತರು.