ಮುಳ್ಳೇರಿಯ: ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಧ್ವಜಾರೋಹಣ ನಡೆಯಿತು. ಶ್ರೀ ದೇವರ ಭೂತಬಲಿ, ತುಲಾಭಾರ ಸೇವೆ, ಪಾಲಕಿ ಸೇವೆನಡೆಯಿತು. ಮಾ. 6ರಂದು ನಡುದೀಪೋತ್ಸವ ನಡೆಯುವುದು. ಬೆಳಗ್ಗೆ ಶ್ರೀ ಭೂತಬಲಿ, ತುಲಾಭಾರ, ರಾತ್ರಿ 9ಕ್ಕೆ ಅಮ್ಮಂಗೋಡು ಕಟ್ಟೆಪೂಜೆ ನಡುದೀಪೋತ್ಸವ, ಶ್ರೀ ದರ್ಗಾಪರಮೇಶ್ವರೀ ಭಜನಾಸಂಘ ಮಲ್ಲ ವತಿಯಿಂದ ಭಜನೆ, ಪಾಲಕಿ ಸಏವೆ, ನೃತ್ಯ ಕಾರ್ಯಕ್ರಮ ಜರುಗಲಿದೆ.
7ರಂದು ರಾತ್ರಿ 10ರಿಂದ ಶ್ರೀ ಭೂತಬಲಿ, ಬೆಡಿ, ರಥೋತ್ಸವ, ನೃತ್ಯ, ಶಯನ ನಡೆಯುವುದ. 8ರಂದು ಬೆಳಗ್ಗೆ ಶಯನೋದ್ಘಾಟನೆ, ಮಂಗಳಾಭಿಷೇಕ, ಶ್ರೀ ಭೂತಬಲಿ, ಅವಭೃತಸ್ನಾನ, ಬಟ್ಟಲುಕಾಣಿಕೆ, ಧ್ವಜಾವರೋಹಣ, ಮಂತ್ರಕ್ಷತೆ ನಡೆಯುವುದ. 9ರಂದು ಬೆಳಗ್ಗೆ 10ಕ್ಕೆ ಶ್ರೀ ಧೂಮಾವತೀ ದಐವದ ನೇಮ ನಡೆಯುವುದು.
ಮಲ್ಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರ ವಾರ್ಷಿಕ ಜಾತ್ರೆ ಆರಂಭ-ಇಂದು ನಡುದೀಪೋತ್ಸವ
0
ಮಾರ್ಚ್ 06, 2023