ಮಂಜೇಶ್ವರ: ಮಂಜೇಶ್ವರ ಉಪಜಿಲ್ಲೆಯಿಂದ ಅಲ್- ಮಾಹಿರ್ ಅರೇಬಿಕ್ ಅಕಾಡೆಮಿಕ್ ಸ್ಕಾಲರ್ ಶಿಪ್ ಪುರಸ್ಕøತ ವರ್ಕಾಡಿ ಬಜಲಕರಿಯ ಎ.ಎಲ್.ಪಿ.ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಫೈಝಾನ್ ಅವರನ್ನು ಕಲ್ಲೂರು ಎಜುಕೇಶನ್ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರಝಾಕ್ ಮುರುಗೋಳಿ ಅಧ್ಯಕ್ಷತೆ ವಹಿಸಿದರು. ಕಲ್ಲೂರು ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಇಬ್ರಾಹಿಂ ಹಾಜಿ ಕಲ್ಲೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲಾ ಅಧ್ಯಾಪಕ ಮುಜೀಬ್ ರೆಹಮಾನ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಲಾ ಶಿಕ್ಷಕಿ ವಿದ್ಯಾಶ್ರೀ, ಮಧುಶ್ರೀ, ಧನ್ಯಶ್ರೀ ಹಾಗೂ ಕಲ್ಲೂರು ಎಜುಕೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಝೀಝ್ ಕಲ್ಲೂರ್ ಮೊದಲಾದವರು ಶುಭಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸಿರಾಜ್ ಪುರುಷಂಗೋಡಿ, ಮಾತೃಸಂಘದ ರಹ್ಮತ್ ತೋಕೆ, ಫಾರೂಖ್ ಪುರುಷಂಗೋಡಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಕವಿತಾ ಟೀಚರ್ ಸ್ವಾಗತಿಸಿ, ಶಾಲಾ ಶಿಕ್ಷಕಿ ಹರಿಣಾಕ್ಷಿ ಟೀಚರ್ ವಂದಿಸಿದರು.
ಅಲ್- ಮಾಹಿರ್ ಅರೇಬಿಕ್ ಅಕಾಡೆಮಿಕ್ ಸ್ಕಾಲರ್ ಶಿಪ್ ಪುರಸ್ಕøತನಿಗೆ ಸನ್ಮಾನ
0
ಮಾರ್ಚ್ 06, 2023
Tags