ತಿರುವನಂತಪುರಂ: ಎಫ್.ಬಿಯಲ್ಲಿ(ಪೇಸ್ ಬುಕ್) ದೇಶವಿರೋಧಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಜೀವ ಬೆದರಿಕೆ ಎದುರಿಸುತ್ತಿರುವ ಭಯೋತ್ಪಾದನಾ ನಿಗ್ರಹ ಸೈಬರ್ ವಿಂಗ್ ಇಂಡಿಯಾದ ನಿರ್ದೇಶಕಿ ಜಿಜಿ ನಿಕ್ಸನ್ ಅವರ ದೂರಿಗೆ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿರುವರು. .
ಪಾಪ್ಯುಲರ್ ಫ್ರಂಟ್ ಹಿಟ್ ಸ್ಕ್ವಾಡ್ ಸದಸ್ಯ ಮೊಹಮ್ಮದ್ ಫಾಜಿಲ್‍ನಿಂದ ಐಎಸ್, ಪಾಪ್ಯುಲರ್ ಫ್ರಂಟ್ ಕೊಲೆ ಬೆದರಿಕೆಗಳು ಮತ್ತು ಬೆದರಿಕೆಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ ನಂತರ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ಸಲ್ಲಿಸಿದರು. ಇದನ್ನು ಆಧರಿಸಿ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿಗಳು ಪಿಣರಾಯಿ ವಿಜಯನ್ ಹಾಗೂ ಕೇರಳ ಡಿಜಿಪಿಗೆ ಸೂಚಿಸಿರುವರು. ರಾಷ್ಟ್ರಪತಿಗಳ ಕಚೇರಿಯ ಮಧ್ಯಪ್ರವೇಶದ ಮೇರೆಗೆ ರಾಜ್ಯ ಸರ್ಕಾರ ಮತ್ತು ಕೇರಳ ಪೊಲೀಸರು ಈ ವಿಷಯದಲ್ಲಿ ಕ್ಷಿಪ್ರ ಕ್ರಮ ಕೈಗೊಂಡಿದ್ದಾರೆ. ಜೀವ ಬೆದರಿಕೆಯ ಕುರಿತು ತನಿಖೆ ನಡೆಸುವಂತೆ ಕೇರಳ ಪೆÇಲೀಸರಿಗೆ ಎನ್‍ಐಎ ನೋಟಿಸ್ ನೀಡಿದೆ ಎಂದು ಜಿಜಿ ನಿಕ್ಸನ್ ಫೇಸ್‍ಬುಕ್ ಪೊಸ್ಟ್‍ನಲ್ಲಿ ಹೇಳಿದ್ದಾರೆ.
ಪಾಪ್ಯುಲರ್ ಫ್ರಂಟ್ ವಿರುದ್ಧ ದೂರು ದಾಖಲಿಸದ ಪೆÇಲೀಸರಿಗೆ ಕಪಾಳಮೋಕ್ಷ: ದೂರು ದಾಖಲಾದ ಕೆಲವೇ ದಿನಗಳಲ್ಲಿ ರಾಷ್ಟ್ರಪತಿ ಮಧ್ಯಸ್ಥಿಕೆ, ತನಿಖೆಗೆ ದೌಡಾಯಿಸಿದ ಪೊಲೀಸರು
0
ಮಾರ್ಚ್ 30, 2023