ಬೆಂಗಳೂರು: ಬೆಂಗಳೂರು ಮೂಲದ ಬಾಹ್ಯಾಕಾಶ ಹಾಗೂ ರಕ್ಷಣಾ ಕಂಪೆನಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಲ್) ನ ಶೇ 3.5 ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು 'ರಾಯಿಟರ್ಸ್' ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದೇ ವಾರದಲ್ಲಿ ಎಎಚ್‌ಎಲ್‌ನ ಷೇರು ವಿಕ್ರಯ ಮಾಡಲಾಗುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹ 2,867 ಕೋಟಿ ಸೇರಲಿದೆ.
ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಲಾದ ದಾಖಲೆಯೊಂದರಿಂದ ಈ ವಿಷಯ ಗೊತ್ತಾಗಿದೆ.
ಕೇಂದ್ರ ಸರ್ಕಾರ ಆರಂಭಿಸಿರುವ ಸರ್ಕಾರಿ ಒಡೆತನದ ಕಂಪನಿಗಳ ಷೇರು ಮಾರಾಟ ಯೋಜನೆಯ ಭಾಗವಾಗಿ ಎಎಚ್‌ಎಲ್‌ನ ಷೇರುಗಳನ್ನು ವಿಕ್ರಯ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.
ಈಗಾಗಲೇ ಸರ್ಕಾರಿ ಸ್ವಾಮ್ಯದ ಕಂಪನಿಗಳ ಷೇರು ವಿಕ್ರಯದಿಂದ ಕೇಂದ್ರ ಸರ್ಕಾರಕ್ಕೆ ₹ 31,110 ಕೋಟಿ ಹರಿದು ಬಂದಿದ್ದು, ಮಾರ್ಚ್ 31ರ ವೇಳೆಗೆ ₹ 50,000 ಕೋಟಿ ಮುಟ್ಟುವ ಗುರಿ ಹಾಕಿಕೊಂಡಿದೆ.
ಸದ್ಯ ಸರ್ಕಾರವು ಎಚ್‌ಎಎಲ್‌ನಲ್ಲಿ ಶೇ 75.15 ರಷ್ಟು ಪಾಲು ಹೊಂದಿದೆ.