ಕಾಸರಗೋಡು:ರಾಜ್ಯ ಪ್ರವಾಸೋದ್ಯಮ ಇಲಾಖೆಯ ನಿರ್ವಹಣಾ ಸಂಸ್ಥೆಯಾದ ಕಿಟ್ಸ್ ನಲ್ಲಿ 2023-25 ಎಂ
ಬಿ ಎ (ಪ್ರಯಾಣ ಮತ್ತು ಪ್ರವಾಸೋದ್ಯಮ) ಬ್ಯಾಚ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ
ಸಲ್ಲಿಸಬಹುದು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ 50%
ಅಂಕಗಳೊಂದಿಗೆ ಗಳಿಸಿದ ಪದವಿ ಮತ್ತು ಕೆಎಂಎಟಿ / ಸಿಎಂಎಟಿ / ಸಿಎಟಿ ಅರ್ಹತೆಯಾಗಿದೆ.
ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಬೇಕಾದ ವೆಬ್‌ಸೈಟ್ www.kittsedu.org
ಕೇರಳ ವಿಶ್ವವಿದ್ಯಾನಿಲಯದ ಮತ್ತು ಎಐಸಿಟಿಇ ಅಂಗೀಕಾರದಲ್ಲಿ ನಡೆಸುವ ಎರಡು ವರ್ಷಗಳ
ಕೋರ್ಸ್ ನಲ್ಲಿ ಟ್ರಾವೆಲ್ ಟೂರ್ ಆಪರೇಷನ್, ಹಾಸ್ಪಿಟಾಲಿಟಿ, ಏರ್‌ಪೋರ್ಟ್
ಮ್ಯಾನೇಜ್‌ಮೆಂಟ್ ಎಂಬೀ ವಿಷಯಗಳ ಜೊತೆಗೆ ಜರ್ಮನ್ ಮತ್ತು ಫ್ರೆಂಚ್ ಭಾಷೆಯನ್ನು ಕಲಿಯುವ
ಅವಕಾಶವನ್ನು ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ
ವಿದ್ಯಾರ್ಥಿಗಳಿಗೆ ಸರಕಾರದಿಂದ ಲಭಿಸುವ ಮೀಸಲಾತಿ ಮತ್ತು ಇತರ ಸವಲತ್ತುಗಳನ್ನು
ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31.
ದೂರವಾಣಿ 9446529467, 9847273135, 0471 2327707.
ಕಿಟ್ಸ್ ನಲ್ಲಿ MBA ಕೋರ್ಸ್‌ಗೆ ಅರ್ಜಿ ಆಹ್ವಾನ
0
ಮಾರ್ಚ್ 28, 2023