HEALTH TIPS

OTT ವೇದಿಕೆಗಳಲ್ಲಿಯ ಅಸಭ್ಯ ಭಾಷೆಯನ್ನು ನಿಯಂತ್ರಿಸುವ ಅಗತ್ಯವಿದೆ: ದಿಲ್ಲಿ ಹೈಕೋರ್ಟ್

               ವದೆಹಲಿ:ಬೇಡಿಕೆಯ ಮೇರೆಗೆ ವೀಡಿಯೊ ಸೇವೆಗಳನ್ನು ಒದಗಿಸುವ OTT ವೇದಿಕೆಗಳಲ್ಲಿ ಅಸಭ್ಯ ಭಾಷೆಗಳೊಂದಿಗಿನ ವಿಷಯವನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು (Delhi High Court) ಹೇಳಿದೆ.

                  ಸೋಮವಾರ ದಿ ವೈರಲ್ ಫೀವರ್ (ಟಿವಿಎಫ್) ಒಟಿಟಿ ವೇದಿಕೆಯ ನಿರ್ಮಾಣದ 'ಕಾಲೇಜ್ ರೊಮ್ಯಾನ್ಸ್' (College Romance) ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾ.

ಸ್ವರ್ಣಕಾಂತಾ ಶರ್ಮಾ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

                  ಕಾರ್ಯಕ್ರಮದಲ್ಲಿ ಬಳಕೆಯಾಗಿರುವ ಭಾಷೆಯು ಅಶ್ಲೀಲ ಮತ್ತು ಅಸಭ್ಯವಾಗಿದೆ ಎಂದು ಹೇಳಿದ ನ್ಯಾಯಾಲಯವು, ಶೋ ನಿರ್ದೇಶಕ ಸಿಮರಪ್ರೀತ್ ಸಿಂಗ್ ಮತ್ತು ನಟಿ ಅಪೂರ್ವಾ ಅರೋರಾ ಅವರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎತ್ತಿ ಹಿಡಿಯಿತು.

             ನ್ಯಾಯಾಲಯವು ಚೇಂಬರ್ನಲ್ಲಿ ವೆಬ್ ಸರಣಿಯ ಸಂಚಿಕೆಗಳನ್ನು ಇಯರ್ ಫೋನ್ಗಳ ನೆರವಿನೊಂದಿಗೆ ವೀಕ್ಷಿಸುವಂತಾಗಿತ್ತು, ಏಕೆಂದರೆ ಬಳಸಿದ್ದ ಭಾಷೆಯು ಎಷ್ಟೊಂದು ಅಶ್ಲೀಲವಾಗಿತ್ತೆಂದರೆ ಸುತ್ತಲಿನ ಜನರನ್ನು ಆಘಾತ ಮತ್ತು ಗಾಬರಿಗೊಳಪಡಿಸದೆ ಅದನ್ನು ಕೇಳಲು ಸಾಧ್ಯವಿರಲಿಲ್ಲ ಎಂದು ನ್ಯಾ. ಶರ್ಮಾ ಹೇಳಿದರು.

                     ಹೆಚ್ಚುವರಿ ಮುಖ್ಯ ಮಹಾನಗರ ಮ್ಯಾಜಿಸ್ಟ್ರೇಟ್ ನಿರ್ದೇಶನದಂತೆ 2019ರಲ್ಲಿ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿತ್ತು. 2020, ನವಂಬರ್ ನಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಎಫ್‌ಐಆರ್ ಅನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಮಾತ್ರ ದಾಖಲಿಸಿಕೊಳ್ಳುವಂತೆ ಸೂಚಿಸಿ ಆದೇಶವನ್ನು ಪರಿಷ್ಕರಿಸಿದ್ದರು. ಟಿವಿಎಫ್ ಈ ಆದೇಶವನ್ನು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು.

                  ಪ್ರತಿಯೊಂದು ದೇಶದಲ್ಲಿಯೂ ನೈತಿಕತೆಯ ಪರಿಕಲ್ಪನೆಯು ಭಿನ್ನವಾಗಿರುತ್ತದೆ ಎಂದು ಸೋಮವಾರದ ಆದೇಶದಲ್ಲಿ ಹೇಳಿರುವ ನ್ಯಾ. ಶರ್ಮಾ, ಭಾರತೀಯ ಸಮಾಜದಲ್ಲಿ ಇಂದಿಗೂ ಹಿರಿಯರ ಉಪಸ್ಥಿತಿಯಲ್ಲಿ, ಧಾರ್ಮಿಕ ಸ್ಥಳಗಳಲ್ಲಿ,ಮಹಿಳೆಯರು ಮತ್ತು ಮಕ್ಕಳ ಎದುರಿನಲ್ಲಿ ಕೆಟ್ಟ ಪದಗಳನ್ನು ಆಡಲಾಗುವುದಿಲ್ಲ. ಇಂತಹ ವೆಬ್ ಸರಣಿಯು ಸಮಾಜದ ನಿರ್ದಿಷ್ಟ ಭಾಗವನ್ನು ಚಿತ್ರಿಸಬಹುದಾದರೂ ಈ ದೇಶದ ಜನಪ್ರಿಯ ಸಂಸ್ಕೃತಿಯು ಈಗಲೂ ನಾಗರಿಕ ಭಾಷೆಯ ದೃಷ್ಟಿಕೋನದೊಂದಿಗೆ ಗುರುತಿಸಿಕೊಂಡಿದೆ ಮತ್ತು ಅಳವಡಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

            ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಪದಗಳು ಮತ್ತು ಅಸಭ್ಯ ಭಾಷೆಯ ಬಳಕೆಯು ಎಳೆಯ ಮನಸ್ಸುಗಳಿಗೆ ನಿಜವಾದ ಬೆದರಿಕೆಯಾಗಿರುವುದರಿಂದ ಅದು ಲಕ್ಷ್ಮಣ ರೇಖೆಯನ್ನು ದಾಟಿದಾಗ ಅದನ್ನೂ ನಿಯಂತ್ರಿಸುವ ಅಗತ್ಯವಿದೆ ಮತ್ತು ಇವೆಲ್ಲ ವಾಕ್ ಸ್ವಾತಂತ್ರದ ಸೋಗಿನಡಿ ರಕ್ಷಣೆಯನ್ನು ಪಡೆಯಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries