HEALTH TIPS

ವಾಜಪೇಯಿ ಕುರಿತ ಆತ್ಮಕಥೆ ಮೆ.10ಕ್ಕೆ ಬಿಡುಗಡೆ

Top Post Ad

Click to join Samarasasudhi Official Whatsapp Group

Qries

                  ವದೆಹಲಿ (PTI): ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕುರಿತ 'ವಾಜಪೇಯಿ: ದಿ ಆಯಕ್ಸೆಂಟ್‌ ಆಫ್‌ ದಿ ಹಿಂದೂ ರೈಟ್‌' ಆತ್ಮಕಥೆಯ ಮೊದಲನೇ ಆವೃತ್ತಿಯು ಮೇ 10ರಂದು ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಪುಸ್ತಕದ ಪ್ರಕಾಶಕರು ತಿಳಿಸಿದ್ದಾರೆ.

               ಈ ಪುಸ್ತಕವು ವಾಜಪೇಯಿ ಕುರಿತ ಜನಪ್ರಿಯ ಮಿಥ್ಯೆಗಳು ಮತ್ತು ಅವರ ಕುರಿತು ಯಾರಿಗೂ ತಿಳಿಯದ ಸಂಗತಿಗಳನ್ನು ಹೊಂದಿದೆ ಎನ್ನಲಾಗಿದೆ

             ಅಭಿಷೇಕ್‌ ಚೌಧರಿ ಎಂಬ ಲೇಖಕರು ಈ ಪುಸ್ತಕವನ್ನು ರಚಿಸಿದ್ದಾರೆ. ಇದನ್ನು ನ್ಯೂ ಇಂಡಿಯಾ ಫೌಂಡೇಷನ್‌ ಸಹಕಾರದೊಂದಿಗೆ ಪಿಕಾಡೋರ್‌ ಇಂಡಿಯಾ ಸಂಸ್ಥೆಯು ಪ್ರಕಟಿಸಿದೆ.

                'ಸಂಘ ಪರಿವಾರದ ಜೊತೆ ವಾಜಪೇಯಿ ಅವರು ತಮ್ಮ ಆರಂಭಿಕ ದಿನಗಳಲ್ಲಿ ಹೊಂದಿದ್ದ ಒಡನಾಟದ ಕುರಿತು ಅರ್ಥ ಮಾಡಿಕೊಳ್ಳುವುದು ಭಾರತದ ಬಲಪಂಥದ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತಲೂ ಕಠಿಣ. 8 ವರ್ಷಗಳು ಗಂಭೀರವಾದ ಅಧ್ಯಯನ ನಡೆಸಲಾಗಿದೆ. ಭಾರತ, ಅಮೆರಿಕ, ಬ್ರಿಟನ್‌ನಲ್ಲಿ ದೊರಕಿದ ಮತ್ತು ಈವರೆಗೂ ಬಹಿರಂಗವಾಗದ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಕಲೆಹಾಕಲಾಗಿದೆ ಮತ್ತು ನೂರಾರು ಜನರ ಸಂದರ್ಶನ ಮಾಡಲಾಗಿದೆ' ಎಂದು ಪ್ರಕಾಶಕರು ಪ್ರಕಟಣೆಯೊಂದರಲ್ಲಿ ಹೇಳಿದ್ದಾರೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries