ನವದೆಹಲಿ: ಅರುಣಾಚಲ ಪ್ರದೇಶದ ಹಲವು ಸ್ಥಳಗಳ ಹೆಸರನ್ನು ಬದಲಿಸಲಾಗಿದೆ ಎನ್ನುವ ಚೀನಾದ ಹೇಳಿಕೆಯನ್ನು ಭಾರತ ನಿರಾಕರಿಸಿದೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಹೇಳಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಗಾಚಿ, 'ಅವಿಷ್ಕಾರ ಮಾಡಿದ ಹೊಸ ಹೆಸರುಗಳಯ ವಾಸ್ತವವನ್ನು ಮರೆಮಾಚಲಾಗದು' ಎಂದು ಹೇಳಿದ್ದಾರೆ.
'ನಾವು ಈ ಥರದ ವರದಿಗಳನ್ನು ನೋಡಿದ್ದೇವೆ. ಈ ಥರ ಚೀನಾದ ಮಾಡುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಇದನ್ನು ನಾವು ತಳ್ಳಿ ಹಾಕುತ್ತಿದ್ದೇವೆ' ಎಂದು ಬಗಾಚಿ ಹೇಳಿದ್ದಾರೆ.
ಅರುಣಾಚಲ ಪ್ರದೇಶದ ಕೆಲ ಗ್ರಾಮಗಳ ಹೆಸರುಗಳನ್ನು ಚೀನಾ ಮರುನಾಮಕರಣ ಮಾಡಿದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದರು.
ಅರುಣಾಚಲ ಪ್ರದೇಶದ 11 ಹಳ್ಳಿಗಳ ಹೆಸರು ಬದಲಿಸಿ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಭಾನುವಾರ ಪ್ರಕಟಣೆ ಹೊರಡಿಸಿತ್ತು.