ಕೂದಲು ತುಂಬಾನೇ ಉದುರಲು ಆರಂಭಿಸಿದಾಗ ಏಕೆ ಕೂದಲು ಉದುರುತ್ತಿದೆ ಎಂಬುವುದೇ
ಬಹುತೇಕರಿಗೆ ಗೊತ್ತಾಗುವುದಿಲ್ಲ.ನೀರಿನಲ್ಲಿ ಬದಲಾವಣೆಯಾಗಿದೆಯೇ? ಪೋಷಕಾಂಶಗಳ
ಕೊರತೆಯಾಗಿದೆಯೇ? ಆರೋಗ್ಯ ಸಮಸ್ಯೆಯಿಂದಲೇ? ಹಾರ್ಮೋನ್‌ಗಳ ಬದಲಾವಣೆಯೇ? ಕೂದಲು ಉದುರಲು
ನಿಖರ ಕಾರಣವೇನು ಎಂಬುವುದು ಗೊತ್ತಾಗುವುದಿಲ್ಲ.
ಕೂದಲು ಉದುರುವಾಗ ಅದಕ್ಕೆ ನಿಖರ ಕಾರಣ ಗೊತ್ತಾದರೆ ಕೂದಲು ಉದುರುವುದನ್ನು
ತಡೆಗಟ್ಟಲು ಸುಲಭವಾಗುವುದು. ತುಂಬಾ ಜನರಿಗೆ ವಿಟಮಿನ್ ಕೊರತೆಯಿಂದಾಗಿ ಕೂದಲು
ಉದುರುತ್ತಿರಬಹುದೇ ಎಂಬ ಸಂಶಯವಿರುತ್ತದೆ. ನಿಮ್ಮ ಕೂದಲಿನಲ್ಲಿ ಈ ಲಕ್ಷಣಗಳು ಕಂಡು
ಬಂದರೆ ಕೂದಲು ಉದುರುವಿಕೆಗೆ ವಿಟಮಿನ್ ಸಮಸ್ಯೆಯೇ ಕಾರಣ ಎಂದು ಹೇಳಬಹುದು. ನಿಮ್ಮ
ಕೂದಲಿನಲ್ಲಿ ಬದಲಾವಣೆಯಾದರೆ ವಿಟಮಿನ್ ಬಿ 12 ಕೊರತೆಯಾಗಿದೆ ಎಂದರ್ಥ ಹೀಗಾದಾಗ ಆರೋಗ್ಯ
ನಿರ್ಲಕ್ಷ್ಯ ಮಾಡಬೇಡಿ:
ವಿಟಮಿನ್ ಬಿ 12:
ವಿಟಮಿನ್ ಬಿ 12 ನರಗಳ ಹಾಗೂ ರಕ್ತ ಕಣಗಳ ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ಬಿ 12
ಕೊರತೆಯಾದರೆ ರಕ್ತ ಹೀನತೆ ಉಂಟಾಗಬಹುದು. ವಿಟಮಿನ್ ಬಿ 12 ನಮಗೆ ನಾವು ಸೇವಿಸುವ
ಆಹಾರದಿಂದ ದೊರೆಯುತ್ತದೆ. ಇದರ ಕೊರತೆಯಾದರೆ ರಕ್ತ ಹೀನತೆ ಉಂಟಾಗುವುದು. ರಕ್ತ ಹೀನತೆ
ಗಂಭೀರವಾದ ಸಮಸ್ಯೆ, ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೆ ಅಪಾಯ.
ವಿಟಮಿನ್ ಬಿ 12 ಕೊರತೆ
ವಿಟಮಿನ್ ಬಿ 12 ನಮ್ಮ ದೇಹಕ್ಕೆ ದೊರೆಯದೇ ಹೋದಾಗ ವಿಟಮಿನ್ ಬಿ 12 ಕೊರತೆ
ಉಂಟಾಗುತ್ತದೆ. ಇದರಿಂದ ದೇಹದ ಕಾರ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ವಿಟಮಿನ್ ಬಿ
12 ಕೊರತೆ ಉಂಟಾದಾಗ ನಾವೇ ಸ್ವತಃ ಕಂಡು ಹಿಡಿಯುವುದು ಕಷ್ಟ, ನೀವು ಎಕ್ಸ್‌ಪರ್ಟ್ ಬಳಿ
ಹೋದಾಗ ಅವರು ಪತ್ತೆ ಹಚ್ಚುತ್ತಾರೆ. ಆದರೆ ನಮಗೆ ಈ ಕುರಿತು ಉಂಟಾದರೆ ತಾನೆ ನಾವು
ವೈದ್ಯರ ಬಳಿ ಹೋಗುವುದು, ಪ್ರಾರಂಭದಲ್ಲಿ ನಮಗೆ ಈ ಕುರಿತು ಗೊತ್ತಾಗುವುದೇ ಇಲ್ಲ. ಆದರೆ
ವಿಟಮಿನ್ ಬಿ 12 ಉಂಟಾದಾಗ ಕೂದಲಿನಲ್ಲಿ ಕೆಲವೊಂದು ಬದಲಾವಣೆಯಾಗಿರುತ್ತದೆ.
ವಿಟಮಿನ್ ಬಿ12 ಉಂಟಾದಾಗ ಕೂದಲಿನಲ್ಲಿ ಕಂಡು ಬರುವ ಲಕ್ಷಣಗಳು
ವಿಟಮಿನ್ ಬಿ 12 ರಕ್ತ ಕಣಗಳು ನಮ್ಮ ಕೂದಲಿನ ಬುಡಕ್ಕೆ ಆಮ್ಲಜನಕ ಪೂರೈಕೆ ಮಾಡಲು
ಅವಶ್ಯಕ. ವಿಟಮಿನ್ ಬಿ 12 ಕೊರತೆ ಉಂಟಾದಾಗ ಕೂದಲಿನ ಬುಡ ಸಡಿಲವಾಗುವುದು, ಕೂದಲು
ಉದುರಲಾರಂಭಿಸುತ್ತದೆ, ಕೂದಲು ತುಂಬಾನೇ ತೆಳ್ಳಗಾಗುವುದು. ಆದ್ದರಿಂದ ಕೂದಲು ತುಂಬಾ
ತೆಳ್ಳಗಾಗುತ್ತಿದ್ದರೆ ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಆಗಿದೆಯೇ ಎಂದು
ಪರೀಕ್ಷಿಸಿದರೆ ಒಳ್ಳೆಯದು.
ಅಕಾಲಿಕ ನೆರೆ
ಅಕಾಲಿಕ ನೆರೆ
ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಉಂಟಾದಾಗ ಅಕಾಲಿಕ ನೆರೆ ಕೂದಲು ಉಂಟಾಗುವುದು. ಬರೀ
ಕೂದಲು ಬೆಳ್ಳಗಾಗುವುದು ಮಾತ್ರವಲ್ಲ ಸುಸ್ತು, ತಲೆಸುತ್ತುವುದು, ತಲೆನೋವು, ಮೈಗ್ರೇನ್,
ಉಗುರುಗಳಲ್ಲಿ ಬಿರುಕು ಈ ಬಗೆಯ ಸಮಸ್ಯೆ ಕಂಡು ಬರುವುದು.
ಇದಲ್ಲದೆ ಉಸಿರಾಟದಲ್ಲಿ ತೊಂದೆ, ಧ್ವನಿಯಲ್ಲಿ ಬದಲಾವಣೆ, ಮೈ ಕೈ ನೋವು ಈ ಎಲ್ಲಾ
ಲಕ್ಷಣಗಳು ಕಂಡು ಬರುವುದು.
ವಿಟಮಿನ್ ಬಿ 12 ಕೊರತೆ ಮೆದುಳಿನ ಮೇಲೆ ಬೀರುವ ಪ್ರಭಾವ
ವಿಟಮಿನ್ ಬಿ 12 ಕೊರತೆಯಿಂದಾಗಿ ಮೆದುಳಿನ ಮೇಲೆ ಕೂಡ ಪ್ರಭಾವ ಬೀರುವುದು. ಇದರಿಂದ ಒಂದು
ರೀತಿಯ ಗೊಂದಲ, ಮರೆವು, ಖಿನ್ನತೆ, ಮೂಡ್ ಸ್ವಿಂಗ್, ಆತಂಕ, ಪರ್ಸಾನಾಲಿಟಿ
ಡಿಸಾರ್ಡರ್ ಹೀಗೆ ಅನೇಕ ಬಗೆಯ ಸಮಸ್ಯೆ ಉಂಟಾಗುವುದು. ವಿಟಮಿನ್ ಬಿ 12 ಕೊರತೆಯಿಂದಾಗಿ
ಅಲ್ಜೈಮರ್ಸ್‌ನಂಥ ಸಮಸ್ಯೆ ಕೂಡ ಉಂಟಾಗುವುದು. ಆದ್ದರಿಂದ ವಿಟಮಿನ್ ಬಿ 12 ಕೊರತೆಯನ್ನು
ನಿರ್ಲಕ್ಷ್ಯ ಮಾಡಲೇಬಾರದು.
ವಿಟಮಿನ್ ಬಿ 12 ಇರುವ ಆಹಾರಗಳು
* ಪ್ರಾಣಿಗಳ ಲಿವರ್, ಕಿಡ್ನಿಯಲ್ಲಿ ವಿಟಮಿನ್ ಬಿ 12 ಇರುತ್ತದೆ
* ತುನಾ, ಬೂತಾಯಿ, ಸಾಲಮೋನ್ ಮೀನಿನಲ್ಲಿ ವಿಟಮಿನ್ 12 ಇದೆ
* ಮೊಟ್ಟೆಯಲ್ಲಿ ವಿಟಮಿನ್ ಬಿ 12 ಇದೆ
* ಚೀಸ್, ಮೊಟ್ಟೆ ಇವುಗಳಲ್ಲಿ ಕೂಡ ವಿಟಮಿನ್ ಬಿ 12 ಇದೆ.
ಕೆಲವೊಂದು ಧಾನ್ಯಗಳಲ್ಲಿ ವಿಟಮಿನ್ ಬಿ 12 ಇದ್ದರೂ ಮಾಂಸಾಹಾರದಲ್ಲಿ ಅಧಿಕವಿರುತ್ತದೆ.
ವಿಟಮಿನ್ ಬಿ 12 ಕೊರತೆಯಾದರೆ ವೈದ್ಯರು ಸಪ್ಲಿಮೆಂಟ್ಸ್ ಸೂಚಿಸಬಹುದು.
ವಿಟಮಿನ್ ಬಿ 12 ಇರುವ ಆಹಾರಗಳು
* ಪ್ರಾಣಿಗಳ ಲಿವರ್, ಕಿಡ್ನಿಯಲ್ಲಿ ವಿಟಮಿನ್ ಬಿ 12 ಇರುತ್ತದೆ
* ತುನಾ, ಬೂತಾಯಿ, ಸಾಲಮೋನ್ ಮೀನಿನಲ್ಲಿ ವಿಟಮಿನ್ 12 ಇದೆ
* ಮೊಟ್ಟೆಯಲ್ಲಿ ವಿಟಮಿನ್ ಬಿ 12 ಇದೆ
* ಚೀಸ್, ಮೊಟ್ಟೆ ಇವುಗಳಲ್ಲಿ ಕೂಡ ವಿಟಮಿನ್ ಬಿ 12 ಇದೆ.
ಕೆಲವೊಂದು ಧಾನ್ಯಗಳಲ್ಲಿ ವಿಟಮಿನ್ ಬಿ 12 ಇದ್ದರೂ ಮಾಂಸಾಹಾರದಲ್ಲಿ ಅಧಿಕವಿರುತ್ತದೆ.
ವಿಟಮಿನ್ ಬಿ 12 ಕೊರತೆಯಾದರೆ ವೈದ್ಯರು ಸಪ್ಲಿಮೆಂಟ್ಸ್ ಸೂಚಿಸಬಹುದು.