ಕೊಚ್ಚಿ: ಸಾರಿಗೆ ಇಲಾಖೆಯ ನಿರ್ಧಾರಗಳನ್ನು ಹೈಕೋರ್ಟ್ ತಿರಸ್ಕರಿಸಿದೆ. ಇನ್ನು ದೂರದ ಮಾರ್ಗಗಳಲ್ಲಿ ಖಾಸಗಿ ಬಸ್‍ಗಳು ಸಂಚಾರ ನಡೆಸಬಹುದು ಎಂದು ಹೈಕೋರ್ಟ್ ಆದೇಶ ನೀಡಿದೆ.
ಖಾಸಗಿ ಬಸ್ಸುಗಳು ತಾತ್ಕಾಲಿಕವಾಗಿ ಪ್ರಸ್ತುತ ಪರವಾನಗಿಯನ್ನು ಬಳಸಿಕೊಂಡು ದೂರ ಮಾರ್ಗಗಗಳ ಪ್ರಯಾಣ ನಡೆಸಬಹುದು. ಬಳಿಕ ಪರವಾನಿಗೆ ನವೀಕರಣಕ್ಕೆ ಕ್ರಮಕೈಗೊಳ್ಳಬಹುದು ಎಂದೂ ಹೈಕೋರ್ಟ್ ನ ಮಧ್ಯಂತರ ಆದೇಶದಲ್ಲಿ ಹೇಳಲಾಗಿದೆ.
140 ಕಿ.ಮೀ ಮೇಲ್ಪಟ್ಟು ಖಾಸಗಿ ಬಸ್‍ಗಳು ಸಂಚರಿಸುವಂತಿಲ್ಲ ಎಂಬುದು ಸಾರಿಗೆ ಇಲಾಖೆಯ ನಿರ್ಧಾರ. ಹಾಗಾಗಿ ಈ ಎಲ್ಲ ದೂರದ ಸೇವೆಗಳನ್ನು ಕೆಎಸ್‍ಆರ್‍ಟಿಸಿ ನಿರ್ವಹಿಸುತ್ತಿತ್ತು. ಹಾಗಾಗಿ ಖಾಸಗಿ ಬಸ್‍ಗಳಿಗೂ ಅವಕಾಶ ನೀಡುವುದರಿಂದ ಕೆಎಸ್‍ಆರ್‍ಟಿಸಿಗೆ ಹಿನ್ನಡೆಯಾಗಲಿದೆ.
ಹೊಸ ಆದೇಶದ ಪ್ರಕಾರ, ದೂರದ ಮಾರ್ಗಗಳಲ್ಲಿ ಅಸ್ತಿತ್ವದಲ್ಲಿರುವ ಪರವಾನಗಿಗಳನ್ನು ಹೊಂದಿರುವವರು ಅಂತಿಮ ಆದೇಶದವರೆಗೆ ಮುಂದುವರಿಯಬಹುದು. ಏತನ್ಮಧ್ಯೆ, ಕೆ.ಎಸ್.ಆರ್.ಟಿ.ಸಿ ಹೊಸದಾಗಿ ಪ್ರಾರಂಭಿಸಲಾದ 223 ಸ್ವಾಧೀನ ಸೇವೆಗಳಿಗೆ 30% ದರ ರಿಯಾಯಿತಿಯನ್ನು ಘೋಷಿಸಿದೆ. ದೂರದ ಸೇವೆಗಳ ಜತೆಗೆ ಅನಧಿಕೃತ ಖಾಸಗಿ ಸೇವೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೆಎಸ್‍ಆರ್‍ಟಿಸಿ ತಿಳಿಸಿದೆ.
ಖಾಸಗಿ ಬಸ್ಸುಗಳು ದೂರ ಪ್ರಯಾಣ ನಿರ್ವಹಿಸಬಹುದು: 140 ಕಿ.ಮೀ. ಮೇಲಿನ ಅನುಮತಿ ನೀಡದ ಸಾರಿಗೆ ಇಲಾಖೆಯ ನಿರ್ಧಾರವನ್ನು ತಿರಸ್ಕರಿಸಿದ ಹೈಕೋರ್ಟ್
0
ಏಪ್ರಿಲ್ 14, 2023
Tags