ಪತ್ತನಂತಿಟ್ಟ: ವಿಷು ಪೂಜೆಗಾಗಿ ಶಬರಿಮಲೆ ದೇವಸ್ಥಾನದ ಗರ್ಭಗೃಹದ ಬಾಗಿಲು ನಾಳೆ ತೆರೆಯಲಾಗುತ್ತದೆ. ನಾಳೆ ಸಂಜೆ 5. ಕ್ಕೆ ತಂತ್ರಿ ಕಂಠಾರರ್ ಮಹೇಶ ಮೋಹನರ್, ಮುಖ್ಯ ಮೇಲ್ಶಾಂತಿ ಕೆ. ಜಯರಾಮನ್ ನಂಬೂದಿರಿ ಗರ್ಭಗೃಹ ತೆರೆದು ದೀಪ ಬೆಳಗಿಸುವರು. ನಂತರ ಹೋಮಕುಂಡದಲ್ಲಿ ಅಗ್ನಿ ಸ್ಪರ್ಶಗೈದು ಒಟ್ಟು ಸಮಾರಂಭ ಆರಂಭಗೊಳ್ಳುತ್ತದೆ.
ನಾಡಿದು ಮುಂಜಾನೆ (12ರಿಂದ) 4.30ಕ್ಕೆ ಗರ್ಭಗೃಹ ತೆರೆಯಲಾಗುತ್ತದೆ. ಬಳಿಕ ನಿರ್ಮಾಲ್ಯ ದರ್ಶನ ನಡೆಯಲಿದೆ. ನಂತರ ಪೂರ್ವ ಮಂಟಪದಲ್ಲಿ ಗಣಪತಿ ಹೋಮ, 5:30 ರಿಂದ 9:00 ರವರೆಗೆ ತುಪ್ಪಾಭಿಷೇಕ ಹಾಗೂ ಅμÁ್ಟಭಿಷೇಕ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಗರ್ಭಗೃಹ ಮುಚ್ಚಲಾಗುವುದು. ಸಂಜೆ 5.00 ಗಂಟೆಗೆ ಮತ್ತೆ ಗರ್ಭಗೃಹ ತೆರೆಯುತ್ತದೆ. ಸಂಜೆ 6.30ಕ್ಕೆ ದೀಪಾರಾಧನೆ ನಂತರ ಪುμÁ್ಪಭಿಷೇಕ, ಪಡಿಪೂಜೆ ನಡೆಯಲಿದೆ. ರಾತ್ರಿ 10.00 ಗಂಟೆಗೆ ಮುಚ್ಚಲಾಗುತ್ತದೆÉ.
15 ರಂದು ಬೆಳಗ್ಗೆ 4.00 ರಿಂದ 7.30 ರವರೆಗೆ ವಿಷುಕಣಿ ದರ್ಶನ ನಡೆಯಲಿದೆ. ದರ್ಶನದ ಬಳಿಕ ಭಕ್ತರಿಗೆ ವಿಷುಕಣಿ ದರ್ಶನದ ಅವಕಾಶ ಸಿಗುತ್ತದೆ. ದೇವಸ್ಥಾನದಲ್ಲಿ ಏಪ್ರಿಲ್ 12 ರಿಂದ 19 ರವರೆಗೆ ವಿವಿಧ ಪೂಜೆಗಳು ನಡೆಯಲಿವೆ. ವಿಷು ಪೂಜೆ ಮತ್ತು ಮಾಸಿಕ ಪೂಜೆ ಬಳಿಕ ಎಪ್ರಿಲ್ 19 ರಂದು ರಾತ್ರಿ 10.00 ಗಂಟೆಗೆ ಗರ್ಭಗೃಹ ಮುಚ್ಚಲಿದೆ.
ನಾಳೆ ಸಂಜೆ ತೆರೆಯಲಿರುವ ಶಬರಿಮಲೆ ಗರ್ಭಗೃಹ: 15ರಂದು ಬೆಳಗ್ಗೆ 4ರಿಂದ ವಿಷುಕಣಿ ದರ್ಶನ
0
ಏಪ್ರಿಲ್ 10, 2023